ಸ್ವರ್ಧಿಸುವ ಕ್ಷೇತ್ರ ಇನ್ನು ಅಂತಿಮಗೊಳಿಸಿಲ್ಲ-ಸಿದ್ದರಾಮಯ್ಯ

ಕೋಲಾರ,ನ,೧೪:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕ್ಷೇತ್ರವನ್ನು ಇನ್ನೂ ಅಂತಿಮಗೊಳಿಸಿಲ್ಲ. ಕೋಲಾರವಲ್ಲದೇ, ಬಾದಾಮಿ, ಕೊಪ್ಪಳ, ಹೆಬ್ಬಾಳ, ವರುಣಾದಿಂದ ಸ್ಪರ್ಧಿಸಲು ಒತ್ತಡವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಾಲೂಕಿನ ಗರುಡಪಾಳ್ಯದಲ್ಲಿ ಭಾನುವಾರ ಮಾದ್ಯಮದವರೊಂದಿಗೆ ಅವರು ಮಾತನಾಡಿ, ಹೈಕಮಾಂಡ್ ಜೊತೆಯೂ ಚರ್ಚಿಸಿದ್ದೇನೆ. ನಾನು ಬಯಸುವ ಕ್ಷೇತ್ರ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಮುನಿಯಪ್ಪ ಜೊತೆಯೂ ಚರ್ಚಿಸಿದ್ದೇನೆ. ಕೋಲಾರದಲ್ಲಿ ಸ್ಪರ್ಧೆಗೆ ಸ್ವಾಗತ ಕೋರಿದ್ದಾರೆ. ಹಾಲಿ ಶಾಸಕರೂ ಕ್ಷೇತ್ರ ಬಿಟ್ಟು ಕೊಡಲು ಸಿದ್ಧರಿದ್ದಾರೆ. ಎಲ್ಲರ ಒತ್ತಾಸೆ ಇರುವುದರಿಂದ ಆಗಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ. ಹೈಕಮಾಂಡ್ ಎಲ್ಲಿ ಹೇಳುತ್ತಾರೋ ಅಲ್ಲಿ ಸ್ಪರ್ಧಿಸುತ್ತೇನೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಸಾಧ್ಯವೇ ಇಲ್ಲ ಎಂದರು.
ಹೈಕಮಾಂಡ್ ಹೇಳಿದರೆ ಕೋಲಾರದಲ್ಲೇ ಸ್ಪರ್ಧೆ ಮಾಡುತ್ತೇನೆ. ಇಲ್ಲಿ ಗೆದ್ದು ಮುಖ್ಯಮಂತ್ರಿ ಆಗಬಾರದಾ ಎಂದು ಪ್ರಶ್ನಿಸಿ ಅವರು ಈ ಕ್ಷೇತ್ರದಲ್ಲಿ ನನ್ನ ಮೇಲೆ ಹೆಚ್ಚಿನ ಪ್ರೀತಿ, ವಿಶ್ವಾಸ ಹಾಗೂ ತೀವ್ರವಾದ ಒತ್ತಡ ಕಂಡು ಬರುತ್ತಿರುವುದು ವ್ಯಾಕ್ತವಾಗಿದೆ ಎಂದರು.
ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುತ್ತೇನೆ, ನನಗೆ ಯಾವೂದೇ ರೀತಿ ಆಂಜಿಕೆ ಎಂಬುವುದಿಲ್ಲ. ಆದರೆ ಬಾದಾಮಿ ಬೆಂಗಳೂರಿಗೆ ದೂರವಿದ್ದು, ಜನರನ್ನು ಭೇಟಿಯಾಗಲು, ಅವರ ಕಷ್ಟಸುಖಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬುವುದು ನನಗೇ ಸಮಸ್ಯೆಯಾಗಿರುವುದು ಹೊರತಾಗಿ ಬೇರೆ ಯಾವೂದೇ ಕಾರಣ ಇಲ್ಲ ಎಂದು ಸ್ವಷ್ಟ ಪಡೆಸಿದರು.
ಬೇರೆ ಕಡೆ ಚುನಾವಣಾ ಪ್ರಚಾರ ನಡೆಸಿ ಕೋಲಾರದಲ್ಲಿ ಪೂರಕ ವಾತಾವರಣವಿರುವ ಇರುವ ಬಗ್ಗೆ ಸಮೀಕ್ಷೆಗಳು ತಿಳಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ೨೦೧೩ರಲ್ಲಿ ವರುಣಾದಿಂದ ಗೆದ್ದು ಮುಖ್ಯಮಂತ್ರಿ ಪಟ್ಟಕ್ಕೇರಿದಿರಿ, ಮತ್ತೆ ಅಲ್ಲಿಂದಲೇ ಸ್ಪರ್ಧಿಸುವಿರಾ ಎಂಬುದಕ್ಕೆ ಬಾದಾಮಿಯಿಂದ ಗೆದ್ದು ವಿರೋಧ ಪಕ್ಷದ ನಾಯಕನಾಗಲಿಲ್ಲವೇ ?, ನಾನು ಮತ್ತು ಸಿ.ಬೈರೇಗೌಡರು ಸ್ನೇಹಿತರು. ಅವರ ಸಮಾಧಿಗೆ ನಮನ ಸಲ್ಲಿಸಿದೆ’ ಎಂದು ಹೇಳಿದರು.
ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರೈತರು ಸೇರಿದಂತೆ ಎಲ್ಲರೂ ಸಿದ್ಧರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವಂತೆ ಮನವಿ ಮಾಡುತ್ತಿದ್ದೇವೆ. ಮುಖಂಡರೂ ಮಾಡುತ್ತಿದ್ದಾರೆ ಎಂದರು.
ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವರಿಷ್ಠರು ಬೇಗನೇ ತೀರ್ಮಾನ ಮಾಡಬೇಕು ಎಂದು ಮನವಿ ಮಾಡಿದರು.