ಸ್ವರ್ಣ ಸಮೂಹ ಸಂಸ್ಥೆಗಳಿಂದ ಪತ್ರಿಕಾ ವಿತರಕರಿಗೆ ಕಿಟ್ ವಿತರಣೆ

ಹುಬ್ಬಳ್ಳಿ,ಜೂ2: ಇಲ್ಲಿಯ ಸ್ವರ್ಣ ಸಮೂಹ ಸಂಸ್ಥೆಗಳ ವತಿಯಿಂದ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಅವರು ನಗರದ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.
ಸ್ಟೇಶನ್ ರಸ್ತೆ ಸ್ವರ್ಣ ಪ್ಯಾರಡೈಸ್ ಹೋಟೆಲ್ ಆವರಣದಲ್ಲಿ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ ಕಿಟ್ ನೀಡಿ ಮಾತನಾಡಿದ ಅವರು, ಕೋವಿಡ್ ಇಡಿ ಪ್ರಪಂಚಕ್ಕೆ ಬಂದಿರುವ ಸಮಸ್ಯೆ. ಕಳೆದ ವರ್ಷ ಲಾಕ್‍ಡೌನ್ ವೇಳೆಯಲ್ಲಿ ತಮ್ಮ ಕಂಪನಿ ವತಿಯಿಂದ ಪತ್ರಿಕಾ ವಿತರಕರು ಸೇರಿ ಕಷ್ಟದಲ್ಲಿರುವ ಅನೇಕರಿಗೆ ನೆರವು ನೀಡಲಾಗಿತ್ತು. ಈ ಸಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಬಹುವಾಗಿ ಕಾಡಿತು. ಹಲವರು ಸಕಾಲದಲ್ಲಿ ಆಮ್ಲಜನಕ ದೊರೆಯದೆ ಸಾವಿಗೀಡಾದರು. ಇಂಥ ಸಂದರ್ಭದಲ್ಲಿ ಸ್ವರ್ಣ ಸಮೂಹ ಸಂಸ್ಥೆ ಜರ್ಮನಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಆಮದು ಮಾಡಿಕೊಂಡು ರೈಲ್ವೆ ಆಸ್ಪತ್ರೆ, ಕಿಮ್ಸ್, ಕ್ಷಮತಾ ಸಂಸ್ಥೆ ಸೇರಿ ಅಗತ್ಯವಿರುವಲ್ಲಿಗೆ ವಿತರಿಸಿದೆ. ಕಿಮ್ಸ್ ಆಸ್ಪತ್ರೆಗೆ ನೂರು ಮಂಚ, ಹಾಸಿಗೆ ಇತ್ಯಾದಿಯನ್ನು ಕೊಡಲಾಗಿದೆ. ಪೆÇಲೀಸರು, ಇತರ ಅನೇಕರಿಗೆ ಮಾಸ್ಕ್, ಸ್ಯಾನಿಟೈಸರ್‍ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಲಾಕ್‍ಡೌನ್ ಎಂದು ಎಲ್ಲರೂ ಮನೆಯಲ್ಲಿ ಕುಳಿತಿರುವಾಗ ಪತ್ರಿಕಾ ವಿತರಕರು ಮನೆ ಮನೆಗೆ ಪತ್ರಿಕೆ ತಲುಪಿಸುತ್ತಿದ್ದಾರೆ. ಕೋವಿಡ್ ಆತಂಕದ ಮಧ್ಯೆಯೂ ಇಂಥ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿರುವವರಿಗೆ ನೆರವು ನೀಡುವುದು ನಮ್ಮ ಧರ್ಮ ಎಂದು ಭಾವಿಸಿz್ದÉೀವೆ. ಹೀಗಾಗಿ, ಅಕ್ಕಿ, ಗೋಧಿ ಹಿಟ್ಟು, ತೊಗರಿಬೇಳೆ, ರವಾ, ಸಕ್ಕರೆ, ಖಾದ್ಯ ತೈಲ, ಉಪ್ಪು ಸೇರಿ ಪ್ರತಿ ಕುಟುಂಬಕ್ಕೆ 10-15 ದಿನಗಳಿಗೆ ಆಗುವಷ್ಟು ಆಹಾರ ಧಾನ್ಯಗಳಿರುವ 350 ಕಿಟ್‍ಗಳನ್ನು ವಿತರಿಸುತ್ತಿz್ದÉೀವೆ. ಭಗವಂತ ಕೊಟ್ಟಿದ್ದರಲ್ಲಿ ಒಂದು ಭಾಗವನ್ನು ಸಮಾಜಕ್ಕೆ ನೀಡಬೇಕು ಎಂಬ ಭಾವನೆಯಿಂದ ಸೇವೆ ಮಾಡುತ್ತಿz್ದÉೀವೆ ಎಂದರು.
ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಸಿ.ಎಸ್. ಹಿರೇಮಠ ಮಾತನಾಡಿ, ಡಾ. ವಿ.ಎಸ್.ವಿ. ಪ್ರಸಾದ ಅವರ ನೆರವು ಸಂಘದ ಸದಸ್ಯರಿಗೆ ಬಹಳ ಉಪಯುಕ್ತವಾಗಿದೆ. ಅವರ ಸಹಕಾರ ಸದಾ ಇರಲಿ ಎಂದರು.
ವಿಜಯವಾಣಿ' ಸ್ಥಾನಿಕ ಸಂಪಾದಕ ಜಗದೀಶ ಬುರ್ಲಬಡ್ಡಿ,ಸಂಯುಕ್ತ ಕರ್ನಾಟಕ’ ವಿಶೇಷ ವರದಿಗಾರ ಬಿ. ಅರವಿಂದ, ಪತ್ರಿಕಾ ವಿತರಕರ ಸಂಘದ ಕಾರ್ಯದರ್ಶಿ ಗಿರಿಧರ ದಿವಟೆ, ಪದಾಧಿಕಾರಿಗಳಾದ ರಮೇಶ ಜಿತೂರಿ, ಶಿವಾಜಿ ತಡಸ, ಅರುಣ ತೋಡಕರ, ಅರುಣ ಹಬೀಬ, ಮುಸ್ತಾಕ ಬೇಪಾರಿ, ಸಂಗಮೇಶ ಅಂಬಿಗೇರ, ಇತರರು ಇದ್ದರು. ಮನೋಹರ ಪರ್ವತಿ ವಂದಿಸಿದರು.