ಸ್ವರ್ಣ ಸಂಸ್ಥೆಯಿಂದ ಮಾಸ್ಕ್, ಸ್ಯಾನಿಟೈಸರ್ ಹಸ್ತಾಂತರ

ಹುಬ್ಬಳ್ಳಿ,ಮೇ28: ಕೊರೊನಾ ಸಂಧಿಗ್ದ ಪರಿಸ್ಥಿತಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫ್ರಂಟ್‍ಲೈನ್ ವಾರಿಯರ್ಸ್ ಆಗಿರುವ ಪೊಲೀಸ್ ಇಲಾಖೆಗೆ ಸ್ವರ್ಣ ಉದ್ಯಮ ಸಮೂಹ ಸಂಸ್ಥೆಯ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಜರ್‍ಗಳನ್ನು ನೀಡಲಾಯಿತು.
ಸ್ವರ್ಣ ಉದ್ಯಮ ಸಮೂಹ ಸಂಸ್ಥೆಯ ವ್ಯವಸ್ಥಾಪಕ, ನಿರ್ದೇಶಕ ಡಾ.ಸಿ.ಎಚ್.ಎಸ್.ವಿ ಪ್ರಸಾದ ಅವರು 2100 ಮಾಸ್ಕ್ ಹಾಗೂ 2100 ಸ್ಯಾನಿಟೈಸರ್‍ಗಳನ್ನು ನವನಗರದ ಪೊಲೀಸ್ ಕಮೀಶನರ ಕಚೇರಿಯಲ್ಲಿ ಡಿಸಿಪಿ ಕೆ.ರಂಗರಾಜನ್ ಅವರಿಗೆ ಹಸ್ತಾಂತರಿಸಿದರು.
ಕೊರೊನಾ ಮಹಾಮಾರಿಯಿಂದ ಎಲ್ಲ ಫ್ರಂಟ್‍ಲೈನ್ ವಾರಿಯರ್ಸ್‍ಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕರ್ತವ್ಯವನ್ನು ನಿರ್ವಹಿಸಬೇಕೆಂದು ಮನವಿ ಮಾಡಿದರು.
ಅಲ್ಲದೇ ಮುಂದೆಯೂ ಇನ್ನೂ ಹೆಚ್ಚಿನ ಸಹಾಯ, ಸಹಕಾರ ನೀಡುವ ಭರವಸೆಯನ್ನು ನೀಡಿದರು.