ಸ್ವರ್ಗಕ್ಕೂ ಮಿಗಿಲಾದದ್ದು ನಿಸರ್ಗ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.31: ತಾಲೂಕಿನ ಹಂದಿಹಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವರ್ಗಕ್ಕೂ ಮಿಗಿಲಾದದ್ದು ನಿಸರ್ಗ ಎಂಬ ದತ್ತಿ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ  ಕತೆಗಾರ ವೀರೇಂದ್ರ ರಾವಿಹಾಳ್,  ಕನ್ನಡ ನಾಡು ನುಡಿಗೆ ಪ್ರತಿಯೊಬ್ಬರು ಕಂಕಣಬದ್ಧರಾಗಿರಬೇಕು‌. ಕನ್ನಡವೆಂದರೆ ಬರಿ ಜನರಲ್ಲ ಗಿಡ ಮರ ಪ್ರಾಣಿ ಪಕ್ಷಿಗಳನ್ನು ಒಳಗೊಂಡ ಸಮಸ್ತ ನಿಸರ್ಗವೂ ಕನ್ನಡವೇ ಎಂದರು.
.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಅವರು ವಹಿಸಿ ಕ.ಸಾ.ಪ ಕಾರ್ಯ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಆಶಯ ನುಡಿಯನ್ನು ಮುಖ್ಯ ಗುರುಗಳಾದ ಟಿ.ಸಿ. ಪಂಪಾಪತಿ ಮಾತನಾಡುತ್ತಾ ಕನ್ನಡದ ಚಟುವಟಿಕೆಗಳು ಗ್ರಾಮೀಣ ಭಾಗದಲ್ಲಿಯೂ ಪಸರಿಸುತ್ತಿರುವುದು ಆಶಾದಾಯಕ ಎಂದರು..
ಮುಖ್ಯ ಉಪನ್ಯಾಸಕರಾಗಿ ಆಗಮಿಸಿ ಪರಿಸರ ಮಾಲಿನ್ಯ ಮತ್ತು ಆರೋಗ್ಯ ಕುರಿತು ಮಾತನಾಡಿದ ಡಾ. ಅರವಿಂದ ಪಟೇಲ್ ಅವರು ಪರಿಸರ ರಕ್ಷಣೆಗೆ ನಾವು ಅನುಸರಿಸಬೇಕಾದ ವಿಧಾನಗಳು ಮತ್ತು ಪ್ಲಾಸ್ಟಿಕ್ ಇತರೆ ಹಾನಿಕಾರಕ ವಸ್ತುಗಳು ಹೇಗೆ ನಿಸರ್ಗಕ್ಕೆ ಮಾರಕ ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಅಭಿಯಂತರರು, ಕವಿಗಳಾದ ಅಜಯ ಬಣಕಾರ, ಮಲ್ಲಯ್ಯ, ವೈ. ಕವಿತ ಆಗಮಿಸಿ ಮಾತನಾಡಿದರು.
ಶಿಕ್ಷಕಿ ಮಹಿಮಾ.ಎಂ.ಸಿ. ಕಾರ್ಯಕ್ರಮ ನಿರ್ವಹಣೆ ಮಾಡಿದರೆ,  ಗೀತಾಂಜಲಿ ಹೆಚ್.ಎಂ. ಸ್ಚಾಗತ ಕೋರಿ, ಶಿಕ್ಷಕಿ  ಎನ್. ಈರಮ್ಮ ವಂದಿಸಿದರು.