ಸ್ವರಾಷ್ಟ್ರನಿಷ್ಠ ಪ್ರಜೆಗಳಿಂದ ಭವ್ಯ ಭಾರತದ ನಿರ್ಮಾಣ ಸಾಧ್ಯ

ಕಲಬುರಗಿ,ಫೆ.19: ಭವ್ಯ ಭಾರತದ ಬುನಾದಿ ಸ್ವರಾಷ್ಟ್ರನಿಷ್ಟ ಪ್ರಜೆಗಳಿಂದಲೇ ಸಾಧ್ಯ. ಅಂತಹ ಪ್ರಜೆಗಳ ನಿರ್ಮಾಣ ರಾಷ್ಟ್ರೋತ್ಥಾನದಂತಹ ಶಾಲೆಗಳಿಂದಲೇ ಸಾಧ್ಯ ಎಂದುನಗರದ ಉದ್ಯಮಿ ಶ್ರೀರಾಮ ಪವಾರ್ ಅವರು ನುಡಿದರು.
ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ಅಭ್ಯಾಗತರಾಗಿ ಅವರು ಆಗಮಿಸಿದರು. ಶ್ರೀ ಬಾಲರಾಮ ಪ್ರತಿಷ್ಠಾಪನಾ ವರ್ಷದ ಅಂಗವಾಗಿ ಕಾರ್ಯಕ್ರಮವು ರಾಮೋತ್ಸವ ವಿಷಯವನ್ನು ಆಧರಿಸಿತ್ತು.
ರಾಷ್ಟ್ರೋತ್ಥಾನ ಪರಿಷತ್ತಿನ ಉಪಾಧ್ಯಕ್ಷ ದ್ವಾರಕಾನಾಥ್‍ಜಿ ದಿಕ್ಸೂಚಿ ಭಾಷಣ ಮಾಡಿಸ್ವಸ್ಥ ಸುಸ್ಥಿರ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ರಾಷ್ಟ್ರೋತ್ಥಾನ ಶಾಲೆಗಳ ಮೂಲಕ ಮಕ್ಕಳು ಅವರ ಮೂಲಕ ಪೆÇೀಷಕರು ಹಾಗೂ ಸಮಾಜವನ್ನು ತೊಡಗಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು. ಶಾಲೆಯ ಕರೆಸ್ಪಾಂಡೆಂಟ್ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲೆಯ ಪ್ರಾಚಾರ್ಯ ಗಿರೀಶ್ ಜೋಶಿವಂದಿಸಿದರು.ರವಿಕುಮಾರ್ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಾಲೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳು ಸಾಂಸ್ಕøತಿಕ ಕಲಾಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮವುರಾಮಾಯಣದ ಕಥೆಗಳು ಹಾಗೂ ನೃತ್ಯಗಳನ್ನು ಒಳಗೊಂಡಿತ್ತು.