ಸ್ವರಣಾರ್ಥದ ಮೂಲಕ ಗುರುವಂದನ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.26: ತಾಲೂಕಿನ ರಾರಾವಿ ಗ್ರಾದಮ ಐತಿಹಾಸಿಕ ಹುತ್ತಿನ ಶ್ರೀಯಲ್ಲಮ್ಮ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಹುತ್ತಿನ ಯಲ್ಲಮ್ಮ ದೇವಿ ದೇವಸ್ಥಾನ ಆಡಳಿತ ಮುಕ್ತೇಶ್ವರರ ಸಹಯೋಗದಲ್ಲಿ ಗಾನಯೋಗಿ ಪಂಚಾಕ್ಷರ ಗವಾಯಿಗಳ ಮತ್ತು ಪುಟ್ಟರಾಜ ಕವಿ ಗವಾಯಿಗಳ ಸ್ವರಣಾರ್ಥವಾಗಿ ಗುರು ವಂದನ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರ ನೀಲಕಂಠಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ವಾಕ್ಯದಲ್ಲಿ ಗುರುವಿನಸೇವೆ ಮತ್ತು ಅನುಗ್ರಹ ಆಗುವವರೆಗೆ ಕಲಿಕೆಯು ಪೂರ್ಣವಾಗದು ಯಾವುದೇ ಕಲೆ ಒಲಿಯಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯ ಎಂದು ತಿಳಿಸಿದರು.
ವೆಂಕಟೇಶ್ ಬಗ್ಗೂರು ಸುಗಮ ಸಂಗೀತ ಗಾಯನಕ್ಕೆ ಸಂದೀಪ್ ಕುಮಾರ್ ಹಾರ್ಮೋನಿಯಮ್ ನುಡಿಸಿದರು, ಪ್ರಶಾಂತ್ ಕುಲಕರ್ಣಿ ತಬಲಾ ಸಾಥ್ ನೀಡಿದರು .
ನಿವೃತ್ತ ಶಿಕ್ಷಕ ಕೆ.ಈರೋಜಿ, ಶಿಕ್ಷಕರಾದ ಅಯ್ಯಪ್ಪ, ಮಂಜುನಾಥ್ ಅಂಗಡಿ,  ರಾಮಲಿಂಗಪ್ಪ ಹೂಗಾರ್ ಬಗ್ಗೂರ್, ಬಸವನಗೌಡ ಮುಕ್ಕುಂದ, ಸೋಮಯ್ಯ ನಾಯಕ್, ಹನುಮಂತಪ್ಪ ರಾರಾವಿ, ವೆಂಕಟೇಶ್ ಹಾವಳಗಿ ಇದ್ದರು.