ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಅನನ್ಯ

  ಚಿತ್ರದುರ್ಗ.ಅ.೨೨: ಶಾಲೆಗಳ ಸಬಲೀಕರಣ ಮತ್ತು ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನ ಮಾಡುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಅನನ್ಯವಾದುದು ಎಂದು ಡಯಟ್ ಉಪ ಪ್ರಾಚಾರ್ಯ ಡಿ.ಆರ್. ಕೃಷ್ಣಮೂರ್ತಿ ತಿಳಿಸಿದರು. ನಗರದ ಡಯಟ್‌ನಲ್ಲಿ  ಯೂತ್ ಫಾರ್ ಸೇವಾ ಸ್ವಯಂ ಸಂಸ್ಥೆಯ ವತಿಯಿಂದ ಜಿಲ್ಲೆಯ ಶಿಕ್ಷಕರಿಗೆ ಎನ್.ಎಮ್,ಎಮ್,ಎಸ್ ತರಬೇತಿ ನೀಡಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ತರಬೇತಿಗಳು ನೆರವಾಗುತ್ತವೆ ಎಂದರು. ಯೂತ್ ಫಾರ್ ಸೇವಾ ಸಂಸ್ಥೆಯ ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥೆ ಕವಿತಾ ಮಾತನಾಡಿ, ಇದು ರಾಷ್ಟಿçÃಯ ಸ್ವಯಂ ಸೇವಾ ಸಂಸ್ಥೆಯಾಗಿದ್ದು ಹೆಚ್ಚು ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್ ಪರೀಕೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನ ಪಡೆಯಲು ತರಬೇತಿ ನೀಡಲಾಗುವುದು. ಶಿಕ್ಷಣದ ಗುಣಮಟ್ಟಕ್ಕಾಗಿ ವಿದ್ಯಾರ್ಥಿಗಳಿಗೆ ಸ್ಫೋಕನ್ ಇಂಗ್ಲಿಷ್ ತರಬೇತಿ ನೀಡುವುದು. ಸೈನಿಕರು ಮತ್ತು ಸಾಧಕರಿಂದ ಉಪನ್ಯಾಸ ಏರ್ಪಡಿಸಿ ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವ ಕಾರ್ಯಕ್ರಮಗಳನ್ನು ಸಂಸ್ಥೆ ವತಿಯಿಂದ ನಡೆಸಲಾಗುವುದು ಎಂದರು. ಚಿತ್ರದುರ್ಗ ಜಿಲ್ಲೆಯ ನೂತನ್ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರ ಮಾತನಾಡಿ, ಬರಪೀಡಿತ ಪ್ರದೇಶದಲ್ಲಿ ಶೈಕ್ಷಣಿಕ ಬೆಳವಣಿಗೆ ಉಂಟು ಮಾಡಲು ಮೊದಲ ಬಾರಿಗೆ ಯೂತ್ ಫಾರ್ ಸೇವಾ ಸಂಸ್ಥೆಯಿAದ ಶಿಕ್ಷಕರಿಗೆ ಪ್ರೇರಣೆ ನೀಡಲು ತರಬೇತಿ ನೀಡಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದ ಪರೀಕ್ಷಾ ತರಬೇತಿ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಆಯ್ದ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಬ್ಯಾಗ್ ವಿತರಿಸಲಾಗುತ್ತದೆ ಎಂದರು.ಎನ್.ಎA.ಎA.ಎಸ್ ನೋಡಲ್ ಅಧಿಕಾರಿ ಕೆ.ಜಿ.ಪ್ರಶಾಂತ್, ಶೈಕ್ಷಣಿಕ ಸಂಯೋಜಕಿ ಮಮತಾ, ಹಿರಿಯ ಉಪನ್ಯಾಸಕರಾದ ಕೆ.ಎಲ್.ಬೋರೆಗೌಡ, ಮಹಮದ್ ಮೋಸಿನ್, ಉಪನ್ಯಾಸಕರಾದ ಎಸ್.ಬಸವರಾಜು, ಕೆ.ಎಂ. ನಾಗರಾಜು, ಇ.ಸಿ.ಓ ಎಂ.ಆರ್. ನಾಗರಾಜು ಸ್ವಯಂ ಸೇವಕ ಸುಪ್ರೀತ್, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಲಿಂಗರಾಜು ಇದ್ದರು.