ಸ್ವಯಂ ಪ್ರೇರಿತ ರಕ್ತದಾನ ಶಿಬಿರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.22: ನಗರದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಮೊಮೋರಿಯಲ್ ಮಹಿಳಾ ಕಾಲೇಜು, ವೈ.ಆರ್.ಸಿ ಘಟಕ, ಎನ್.ಎಸ್.ಎಸ್ ಘಟಕ, ಹೆಲ್ತ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸ್ಪಂದನಾ ಚಾರಿಟೇಬಲ್ ಟ್ರಸ್ಟ್, ಮತ್ತು ವಿಮ್ಸ್, ಇವರ ಸಂಯುಕ್ತಾಶ್ರಯದಲ್ಲಿ  “ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತ ಗುಂಪಿನ ತಪಾಸಣೆ” ಶಿಬಿರವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ||.ಎಸ್.ಜೆ.ವಿ.ಮಹಿಪಾಲ್, ಉಪ ಸಭಾಪತಿ, ರೆಡ್ ಕ್ರಾಸ್ ಸಂಸ್ಥೆ ಇವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ, ಮಹಿಳೆಯರು ಎಲ್ಲಾ ವಿಷಯದಲ್ಲಿ ಮುಂದೆ ಇದ್ದು ತಮ್ಮ ಕೆಲಸದ ಒತ್ತಡ ವಿರುವುದರಿಂದ ಯುವ ಮಹಿಳೆಯರು ರಕ್ತದಾನ ಮಾಡಿ ಅನೇಕರ ಜೀವನವನ್ನು ಉಳಿಸಲು ಒಂದು ಸುವರ್ಣ ಅವಕಾಶವೆಂದು ತಿಳಿಸಿದರು.
ಇದೇ ರೀತಿಯಿಂದ ಸಮಾಜ ಸೇವೆ ಮಾಡಲು ಮುಂದಾಗಬೇಕೆಂದು ಕೋರಿದರು. ಬಿ.ದೇವಣ್ಣ ರಕ್ತದಾನಿ ಇವರು ತಮ್ಮ ಜೀವನದಲ್ಲಿ ರಕ್ತದಾನ ಮಾಡಿದ ಶತಕವನ್ನು ಬಾರಿಸಿದ್ದಕ್ಕೆ ಶ್ರೀಮತಿ ಅಲ್ಲಂ ಸುಮಂಗಳಮ್ಮ ಮೊಮೋರಿಯಲ್ ಮಹಿಳಾ ಕಾಳೆಜುನಿಂದ ಸನ್ಮಾನ ಮಾಡಲಾಯಿತು. 
ಈ ಸಂದರ್ಭದಲ್ಲಿ ಎಸ್.ವೈ.ತಿಮ್ಮಾ ರೆಡ್ಡಿ, ಪ್ರಾಂಶುಪಾಲರು, ಶ್ರೀಮತಿ ಅಲ್ಲಂ ಸುಮಂಗಳಮ್ಮ ಮೊಮೋರಿಯಲ್ ಮಹಿಳಾ ಕಾಳೆಜು, ಬಳ್ಳಾರಿ. ಶ್ರೀಮತಿ.ವಾಣಿ, ಕಾರ್ಯಕ್ರಮ ಅಧಿಕಾರಿ, ವೈ.ಆರ್.ಸಿ ಘಟಕ. ಎಂ.ಎ.ಷಕೀಬ್, ಕಾರ್ಯದರ್ಶಿ, ಭಾರತೀಯ ರೆಡ್ ಕರಾಸ್ ಸಂಸ್ಥೆ, ಬಳ್ಳಾರಿ. ಶ್ರೀಮತಿ.ಸಾದನಾ ಹಿರೇಮಠ, ಇ.ಸಿ ಸದಸ್ಯರು, ಶ್ರೀಮತಿ.ಶಾಂತಬಾಯಿ ಕಟ್ಟಿಮಣಿ, ಕಾರ್ಯಕ್ರಮ ಅಧಿಕಾರಿ, ಕೆ.ಎಸ್.ಜಿ.ಎಫ್. ಶ್ರೀಮತಿ.ರಿಜ್ವಾನ, ರೆಡ್ ಕ್ರಾಸ್ ಸದಸ್ಯರು, ಮಹಮ್ಮದ್ ಆದಿಲ್ ಹಂಝಾ ಮತ್ತು ರಾಮಾಂಜಿನಿ ಇವರು ಉಪಸ್ಥಿತಿರಿದ್ದರು.

Attachments area