ಲಸಿಕೆ ಹಾಕಿಸಿಕೊಳ್ಳಿ: ಜನರಿಗೆ ಕೇಂದ್ರ ಮನವಿ

ನವದೆಹಲಿ, ಡಿ 17- ದೇಶದಲ್ಲಿ ತಯಾರಾಗುತ್ತಿರುವ ಕೊರೊನಾ ಲಸಿಕೆ ಇತರ ದೇಶಗಳಿಗಿಂತ ಪರಿಣಾಮಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸ್ವ ಇಚ್ವೆಯಿಂದ ಕೋವಿಡ್ -19 ಲಸಿಕೆ ಹಾಕಿಸಿಕೊಳ್ಳಬೇಕೆಂದು ಕೇಂದ್ರ ಸಚಿವಾಲಯ ತಿಳಿಸಿದೆ.
ರೋಗ ನಿರೋಧಕ ಪ್ರತಿಕ್ರಿಯೆ ಅಭಿವೃದ್ಧಿಗೊಳ್ಳಲು ಸಹಾಯ ಮಾಡುವ ಕಾರಣದಿಂದ ಮಾರ್ಗಸೂಚಿ ಅನ್ವಯ ಅವಧಿಗೆ ತಕ್ಕಂತೆ ನಿಗದಿ ಅಳತೆಯಲ್ಲಿ ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕೆಂದು ಸಲಹೆ ಮಾಡಿದೆ.
ಲಸಿಕೆಯು ಎರಡನೇ ಡೋಸ್ ಪಡೆದ ಬಳಿಕ ಎರಡು ವಾರಗಳಲ್ಲಿ ದೇಹದಲ್ಲಿ ಪ್ರತಿಕಾಯಗಳು ರಕ್ಷಣಾತ್ಮಕ ಮಟ್ಟದಲ್ಲಿ ಬೆಳವಣಿಗೆಯಾಗಲಿದೆ. ಮಾರ್ಗಸೂಚಿಯ ನಿಯಮಗಳನ್ನು ಪಾಲಿಸುವುದು ಸೂಕ್ತ ವೆಂದು ಹೇಳಿದೆ.
ಕೋವಿಡ್- 19 ಲಸಿಕೆ ಕುರಿತು ಪದೇ ಪದೇ ಕೇಳಲಾಗುತ್ತಿರುವ (ಎಫ್‌ಎಕ್ಯು ) ಲಸಿಕೆ ಪಡೆಯುವುದು ಕಡ್ಡಾಯವೇ, ಪ್ರತಿಕಾಯಗಳು ಅಭಿವೃದ್ದಿಯಾಗಲು ಎಷ್ಟು ಸಮಯ ಬೇಕಾಗುತ್ತದೆ, ಕೊರೊನಾ ಸೋಂಕಿನಿಂದ ಗುಣಮುಖರಾದವರೂ ಈ ಲಸಿಕೆಯನ್ನು ತೆಗೆದುಕೊಳ್ಳಬೇಕೇ ಈ ರೀತಿಯ ಹಲವಾರು ಪ್ರಶ್ನೆಗಳಿಗೆ ಆರೋಗ್ಯ ಇಲಾಖೆ ಉತ್ತರ ನೀಡಲು‌ ಮುಂದಾಗಿದೆ.

ಕೋವಿಡ್‌ 19‘ ಲಸಿಕೆಯನ್ನು ಸ್ವಯಂ ಪ್ರೇರಿತರಾಗಿ ತೆಗೆದುಕೊಳ್ಳಬೇಕು. ಸಮುದಾಯದ ಆರೋಗ್ಯದ ದೃಷ್ಟಿಯಿಂದ ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಲು ಲಸಿಕೆಯ ಪೂರ್ಣ ವೇಳಾಪಟ್ಟಿ ಯಂತೆ ಲಸಿಕೆ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಹೇಳಿದೆ.