ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಿ : ಡಾ. ರವೀಂದ್ರ

ಕಾಳಗಿ. ಏ.21 : ಕೋವಿಡ್ -19 ಎರಡನೇಯ ಅಲೆ ಪ್ರಾರಂಭವಾಗಿ ಸೋಂಕು ಸಮುದಾಯದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಜನತೆ ಸ್ವಯಂ ನಿಯಂತ್ರಣ ವಿದಿಸಿಕೊಳ್ಳುವಂತೆ ಕಾಳಗಿ ಸ್ಕ್ಯಾನಿಂಗ ಸೆಂಟರ ಮತ್ತು ಕ್ಲಿನಿಕನ ವೈದ್ಯರಾದ ಡಾ. ರವೀಂದ್ರ ಹಾಗೂ ಡಾ. ಉಮಾ ರವೀಂದ್ರ ರಾಜಪುರ ಜನತೆಗೆ ಸಲಹೆ ನೀಡಿದ್ದಾರೆ.
ಸೋಂಕು ನಿಯಂತ್ರಣ ಪ್ರತಿಯೊಬ್ಬರು ಕರ್ತವ್ಯ ವಾಗಿರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಇನ್ನು ಮುಂದೆ 19 ವರ್ಷ ಮೇಲ್ಪಟ್ಟ ಎಲ್ಲರೂ ಕೋವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ ಅವರು ಮನೆಯಿಂದ ಹೊರ ಬರುವಾಗ ತಪ್ಪದೇ ಮಾಸ್ಕ್ ಹಾಕಿಕೊಂಡು, ಆಗಾಗ ಸ್ಯಾನಿಟೈಜರ್ ಬಳಸಬೇಕು ಮತ್ತು ಸಾಬೂನಿನಿಂದ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು ಅಲ್ಲದೆ ಸಾಮಾಜಿಕ ಅಂತರ ಪಾಲಿಸುತ್ತ ವಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತ ನಮ್ಮನ್ನು ನಾವು ರಕ್ಷಿಸಿಕೊಂಡು ಕೊರೊನಾದಿಂದ ದೇಶವನ್ನು ಮುಕ್ತಗೊಳಿಸೋಣ ಎಂದು ಡಾ. ರವೀಂದ್ರ ಹಾಗೂ ಡಾ. ಉಮಾ ರವೀಂದ್ರ ರಾಜಪುರ ಹೇಳಿದ್ದಾರೆ.