ಸ್ವಯಂ ಉದ್ಯೋಗಿಗಳ ಆದಾಯಕ್ಕೆ ಕೊರೊನಾ ಗದಾಪ್ರಹಾರ

ಬೆಂಗಳೂರು, ನ ೨- ಕೋವಿಡ್ ಪಿಡುಗಿನಿಂದಾಗಿ ಸ್ವಯಂ ಉದ್ಯೋಗಿಗಳ ಆದಾಯ ನಷ್ಟ ಉಂಟಾಗಿ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸಮೀಕ್ಷೆ ತಿಳಿಸಿದೆ.
ಸಾಲ ನೀಡುವ ಅತಿದೊಡ್ಡ ಡಿಜಿಟಲ್ ಮಾರುಕಟ್ಟೆ ತಾಣವಾಗಿರುವ ಪೈಸಾಬಜಾರ್‌ಡಾಟ್‌ಕಾಂ (Pಚಿisಚಿbಚಿzಚಿಚಿಡಿ.ಛಿom) ಆರು ಮಹಾನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಆದಾಯ ನಷ್ಟ ಮತ್ತು ಸಾಲ ಮರುಪಾವತಿಯಲ್ಲಿ ಜನರು ವಿವಿಧ ಬಗೆಯ ಹಣಕಾಸು ಸಮಸ್ಯೆಗಳನ್ನು ಎದುರಿಸಿದ ವಿಷಯದಲ್ಲಿ ಚೆನ್ನೈ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಾಧಿತವಾಗಿದೆ. ದೆಹಲಿ (ರಾಷ್ಷ್ರೀಯ ರಾಜಧಾನಿ ಪ್ರದೇಶ) ಮೊದಲ, ಬೆಂಗಳೂರು, ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಹೈದರಾಬಾದ್ (ತೃತೀಯ) ಮತ್ತು ಮುಂಬೈ ನಾಲ್ಕನೇ ಸ್ಥಾನದಲ್ಲಿ ಇವೆ.
ದೇಶದ ೩೫ ನಗರಗಳಲ್ಲಿನ ‘ಪಾಲಿಸಿಬಜಾರ್‌ಡಾಟ್‌ಕಾಂ‘ನ ೮,೫೦೦ ಕ್ಕೂ ಹೆಚ್ಚು ಗ್ರಾಹಕರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ? ೧ ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ಪಡೆದ ೨೪ರಿಂದ ೫೭ ವರ್ಷದ ಒಳಗಿನವರು ವ್ಯಕ್ತಪಡಿಸಿದ ಅಭಿಪ್ರಾಯ ಆಧರಿಸಿ ಈ ಸಮೀಕ್ಷಾ ಫಲಿತಾಂಶ ಪ್ರಕಟಿಸಲಾಗಿದೆ.
ಕೋವಿಡ್‌ಗೆ ಸಂಬಂಧಿಸಿದ ನಿರ್ಬಂಧನೆಗಳಿಂದಾಗಿ ಶೇ ೮೬ಕ್ಕೂ ಹೆಚ್ಚು ಸ್ವಯಂ ಉದ್ಯೋಗಿಗಳು ಆದಾಯ ನಷ್ಟಕ್ಕೆ ಗುರಿಯಾಗಿದ್ದಾರೆ. ತಮ್ಮ ತಿಂಗಳ ಸಂಬಳದ ಮೇಲೆ ಕೋವಿಡ್ ಪಿಡುಗು ಪ್ರತಿಕೂಲ ಪರಿಣಾಮ ಬೀರಿರುವುದಾಗಿ ಶೇ ೫೬ರಷ್ಟು ಉದ್ಯೋಗಿಗಳು ಹೇಳಿಕೊಂಡಿದ್ದಾರೆ. ಸ್ವಯಂ ಉದ್ಯೋಗಿಗಳು ಮತ್ತು ಕಡಿಮೆ ಆದಾಯದ ವರ್ಗದವರಿಗೆ ಸಾಲ ಸೌಲಭ್ಯದಲ್ಲಿ ಹೆಚ್ಚಳಗೊಳ್ಳಲು ಕೆಲಮಟ್ಟಿಗೆ ವಿಳಂಬವಾಗಲಿದೆ ಎಂದು ಪೈಸಾಬಜಾರ್‌ಡಾಟ್‌ಕಾಂನ ಸಹಸ್ಥಾಪಕ ಮತ್ತು ಸಿಇಒ ನವೀನ್ ಕುಕ್ರೆಜಾ ಅವರು ತಿಳಿಸಿದ್ದಾರೆ.