ಸ್ವಯಂ ಉದ್ಯೋಗದ ಒಲವು ಹೊಂದಲು ಪದವೀಧರರಿಗೆ ಕರೆ

ಕಂಪ್ಲಿ, ನ.9: ಪದವಿಧರರು ಸ್ವಯಂ ಉದ್ಯೋಗಗಳಿಸುವಲ್ಲಿ ಜಾಗೃತಿ ತೋರಬೇಕು ಎಂದು ಇಲ್ಲಿನ ಪಿಎಸ್‍ಐ ಮೌನೇಶ್ ಯು.ರಾಥೋಡ್ ಹೇಳಿದರು.
ಇಲ್ಲಿನ ವಿಕಾಸ್ ತರಬೇತಿ ಕೇಂದ್ರದ ಆವರಣದಲ್ಲಿ ಭಾನುವಾರ ಕರ್ನಾಟಕ ಪದವಿಧರರ ವೇದಿಕೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕರೊನಾ ವಾರಿಯರ್ಸ್‍ಗೆ ಗೌರವ ಸಮರ್ಪಣೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು.
ಕರೊನಾ ವಾರಿಯರ್ಸ್‍ಗಳಾದ ಪಿಎಸ್‍ಐ ಮೌನೇಶ್ ರಾಥೋಡ್, ವೈದ್ಯ ಡಾ.ಮಲ್ಲೇಶಪ್ಪ, ಆಶಾ ಕಾರ್ಯಕರ್ತೆ ಚಂದ್ರಲೇಖಾ, ಅಂಗನವಾಡಿ ಕಾರ್ಯಕರ್ತೆ ಸುಭಾಷಿಣಿ, ಪೌರ ಕಾರ್ಮಿಕಳಾದ ಸಾವಿತ್ರಿ, ಶಿಕ್ಷಕ ಸಿಆರ್‍ಪಿ ಜೆ.ಕೆ.ಮಂಜುನಾಥ, ಪತ್ರಕರ್ತ ಬಿ.ಡಿ.ಮಂಜುನಾಥ ಇವರನ್ನು ಸನ್ಮಾನಿಸಲಾಯಿತು.
ಬಳಿಕ ವೇದಿಕೆಯ ಪದಾಧಿಕಾರಿಗಳನ್ನು ಸರ್ವಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಎಚ್.ಪಂಪಾಪತಿ(ಅಧ್ಯಕ್ಷ), ಎಸ್.ರಾಮು(ಗೌರವಾಧ್ಯಕ್ಷ), ಸೈಯ್ಯದ್ ಉಮೇಶ್, ಸಾಹೇಬ್ ಖಾದ್ರಿ (ಉಪಾಧ್ಯಕ್ಷರು), ಎ.ನಿರಂಜನ್(ಪ್ರ.ಕಾರ್ಯದರ್ಶಿ), ಪೀರಾಸಾಬ್ ನೆಲ್ಲೂಡಿ(ಸಂ.ಕಾರ್ಯದರ್ಶಿ), ಎಚ್.ಮರಿಯಪ್ಪ(ಖಜಾಂಚಿ), ಎಚ್.ಮಲ್ಲೇಶ್(ಕಾನೂನು ಸಲಹೆಗಾರ), ಸಿ.ಶೇಖಣ್ಣ, ಟಿ.ಶಿವರಾಜ್, ಕೆ.ಶ್ರೀನಿವಾಸ್, ಭರತ್‍ಕುಮಾರ್, ಎಚ್.ಹನುಮಂತಯ್ಯ, ಕೆ.ಶಿವರುದ್ರ, ಶ್ರೀಶೈಲ್ ಮೆಟ್ರಿ, ಶಿವಪ್ರಕಾಶ್ ಮೆಟ್ರಿ, ಸಿ.ಲೋಕೇಶ್, ಸಿ.ಮಲ್ಲಿಕಾ(ಸದಸ್ಯರು)ಆಯ್ಕೆಗೊಂಡರು.
ಸಂಘದ ಅಧ್ಯಕ್ಷ ಎಚ್.ಪಂಪಾಪತಿ ಅಧ್ಯಕ್ಷತೆವಹಿಸಿದ್ದರು. ರಾಜ್ಯಾಧ್ಯಕ್ಷ ಕೆ.ಕೆ.ಹಾಳ್ ಗೋವರ್ಧನ್, ಸಾಹಿತಿ ವಿನೋಧ ಕರಣಂ, ಪ್ರಾಚಾರ್ಯ ಬಿ.ವೀರೇಶ್, ಎಂ.ಎಸ್.ಮುನ್ನಾ, ಅಕ್ಕಿ ಜಿಲಾನ್, ಅರುಣ್ ಭೂಪಾಲ್, ಹಂಸಲೇಖ ಕಲಾ ತಂಡದವರು, ಸಂಘದ ಸದಸ್ಯರು ಸೇರಿ ಅನೇಕರಿದ್ದರು.