ತೆಲುಗು ಚಿತ್ರರಂಗದ ಉದಯೋನ್ಮುಖ ನಟ ನಿಖಿಲ್ ಸಿದ್ದಾರ್ಥ್ ಜನುಮದಿನದ ಪ್ರಯುಕ್ತ ಅವರ ನಟನೆಯ 20ನೇ ಚಿತ್ರ ಘೋಷಣೆ ಮಾಡಲಾಗಿದೆ.
ಭರತ್ ಕೃಷ್ಣಮಾಚಾರಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಸ್ವಯಂಭೂ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಪಿಕ್ಸೆಲ್ ಸ್ಟುಡಿಯೋ ಮೂಲಕ ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ.
ಸ್ವಯಂಭೂ ಎಂದರೆ ಸ್ವಯಂ ಹುಟ್ಟು ಎಂದರ್ಥ. ಇನ್ನು, ಫಸ್ಟ್ ಲುಕ್ ಪೋಸ್ಟರ್ ನಲ್ಲಿ ನಿಖಿಲ್, ಉದ್ದವಾದ ಕೂದಲು ಬಿಟ್ಟು ಒಂದು ಕೈಯಲ್ಲಿ ಈಟಿ, ಮತ್ತೊಂದು ಕೈಯಲ್ಲಿ ಗುರಾಣಿ ಹಿಡಿದು ವೀರಯೋಧನಂತೆ ಕಾಣಿಸಿಕೊಂಡಿದ್ದಾರೆ. ಸಹಸ್ರಮಾನಗಳ ಹಿಂದಿನ ಕಥೆಯನ್ನೊಳಗೊಂಡಿರುವ ಸ್ವಯಂಭೂ ಸಿನಿಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರವಾಗಿದೆ. ಮನೋಜ್ ಪರಮಹಂಸ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ವಾಸುದೇವ್ ಮುನೆಪ್ಪಗರಿ ಚಿತ್ರಕ್ಕೆ ಸಂಭಾಷಣೆ ನೀಡಿದ್ದಾರೆ.