ಸ್ವಮೂತ್ರಪಾನ ಮದ್ದು :ಪಾಠ ವಾಪಸ್ಸಿಗೆ ಆಗ್ರಹ

ಕಲಬುರಗಿ ನ 18: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಅನ್ವಯ,
ಮೈಸೂರು ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ, ಪದವಿ ವೈದ್ಯಕೀಯ
ಸಮಾಜಶಾಸ್ತ್ರ ಪುಸ್ತಕದಲ್ಲಿ ಏಡ್ಸ್ ಕ್ಯಾನ್ಸರ್‍ಗೆ ಸ್ವಮೂತ್ರ ಪಾನವೇ
ಮದ್ದು ಎಂದು ಅಳವಡಿಸಿರುವದು ಅವೈಜ್ಞಾನಿಕತೆಯ ಪರಮಾವಧಿ ಎಂದು ಎಐಡಿಎಸ್ ಓ ಜಿಲ್ಲಾ ಅಧ್ಯಕ್ಷ ಹಣಮಂತ ಎಸ್,ಹೆಚ್ ಮತ್ತು ಕಾರ್ಯದರ್ಶಿ ತುಳಜರಾಮ ಎನ್,ಕೆ ಹೇಳಿದ್ದಾರೆ.
ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ವೈಜ್ಞಾನಿಕವಾಗಿ ಸಾಬೀತಾಗಿರುವ
ಅಂಶಗಳನ್ನು ಸೇರಿಸಬೇಕೆ ಹೊರತು, ಕೇವಲ ಪ್ರಾಚೀನ ಗ್ರಂಥಗಳನ್ನು
ಉಲ್ಲೇಖ ಮಾಡಿ ಈ ರೀತಿ ಪಠ್ಯಗಳನ್ನು ರಚಿಸಿರುವುದನ್ನು ಈ ಕೂಡಲೇ ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.