ಸ್ವಪ್ನಾ ಜೊತೆ ೭ ಬಾರಿ ಶಿವು ಯುಎಇ ಪ್ರವಾಸ ಬಹಿರಂಗ

ಕೊಚ್ಚಿ (ಕೇರಳ) ಡಿ.೩೦- ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಕಾರ್ಯದರ್ಶಿ ಶಿವಶಂಕರ್ ಅವರು ಚಿನ್ನ ಕಳ್ಳಸಾಗಾಣಿಕೆಯ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರೊಂದಿಗೆ ಏಳು ಬಾರಿ ಯುಎಇಗೆ ಪ್ರವಾಸ ಮಾಡಿರುವುದನ್ನು ಕಸ್ಟಮ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಈ ಸಂಬಂಧ ನ್ಯಾಯಾಲಯಕ್ಕೆ ಹೆಚ್ಚುವರಿಯಾಗಿ ಆರೋಪಪಟ್ಟಿ ಸಲ್ಲಿಸಲಾಗಿದ್ದು ೭ ಬಾರಿಯೂ ಶಿವಶಂಕರ್ ಅವರು ಸಪ್ನ ಸುರೇಶ್ ಅವರೊಂದಿಗೆ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು ಮತ್ತು ಅದರ ಮೊತ್ತವನ್ನು ತಮ್ಮ ವೈಯಕ್ತಿಕ ಪಾವತಿ ಮಾಡಿದ್ದರು ಎಂದು ತಿಳಿಸಿದೆ.
ಆರ್ಥಿಕ ಅಪರಾಧಗಳ ಹೆಚ್ಚುವರಿ ಮುಖ್ಯ ನ್ಯಾಯಾಲಯಕ್ಕೆ ಕಸ್ಟಮ್ ಅಧಿಕಾರಿಗಳು, ಸ್ವಪ್ನ ಸುರೇಶ್, ಶಿವಶಂಕರ್ ಅವರು ಜೊತೆಯಾಗಿ ಪ್ರವಾಸ ಮಾಡಿದ್ದ ವಿವರ, ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ವಿವರ ಸೇರಿದಂತೆ ಹಲವು ಪೂರಕ ಮಾಹಿತಿಯನ್ನು ಸಲ್ಲಿಸಿದ್ದಾರೆ.
ಏಳು ಬಾರಿ ಯುಎಇಗೆ ಪ್ರವಾಸ ಮಾಡಿರುವ ಹಿಂದೆ ವೈಯಕ್ತಿಕ ಹಿತಾಸಕ್ತಿ ಕೂಡಿದೆ ಸರ್ಕಾರದ ಹಿರಿಯ ಅಧಿಕಾರಿಯಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಚಿನ್ನ ಕಳ್ಳಸಾಗಣೆಯ ಪ್ರಮುಖ ಆರೋಪಿಯಾಗಿರುವ ಸ್ವಪ್ನ ಸುರೇಶ್ ಅವರೊಂದಿಗೆ ಮಾಜಿ ಕಾರ್ಯದರ್ಶಿ ಶಿವಶಂಕರ್ ಅವರು ಸಂಬಂಧ ಇದಕ್ಕೆ ಸಹಕಾರ ನೀಡಲು ಕಾರಣ ಎನ್ನುವ ಸಂಗತಿ ಬಯಲಾಗಿದೆ.
ಭಾರತ ಮತ್ತು ಯುಎಇ ನಡುವೆ ಉತ್ತಮ ಸ್ನೇಹ ಸಂಬಂಧ ಸಾಧಿಸುವ ಸಲುವಾಗಿ ಅಲ್ಲಿನ ಭಾರತೀಯ ಕಚೇರಿಯಲ್ಲಿ ಕೆಲಸಕ್ಕೆ ಸೇರಿಸುವ ನೆಪದಲ್ಲಿ ಅಲ್ಲಿಂದ ಅಪಾರ ಪ್ರಮಾಣದಲ್ಲಿ ಚಿನ್ನ ಕಳ್ಳಸಾಗಣೆ ಮಾಡುವ ಉದ್ದೇಶ ಹೊಂದಿದ್ದರು ಎನ್ನುವ ಸಂಗತಿಯನ್ನು ಬೆಳಕಿಗೆ ತರಲಾಗಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ