ಸ್ವಧಾರ ಕೇಂದ್ರದಲ್ಲಿ ಅಂಬೇಡ್ಕರ್ ಜಯಂತಿ

ಬೀದರ್:ಎ.16: ನಗರದ ಟೀಚರ್ ಕಾಲೋನಿಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳದ ವತಿಯಿಂದ ಸ್ವಧಾರ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ ರವರ ಜಯಂತಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿದ ಆಪ್ತ ಸಮಾಲೋಚಕ ಮನೋಹರ ಬಿ ಅವರು ಅಂಬೇಡ್ಕರ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಾತನಾಡಿ, ಜೀವನದ ಕುರಿತು ಫಲಾನುಭವಿಗಳಿಗೆ ತಿಳಿಸಿದರು. ಅಂಬೇಡ್ಕರ ಅವರು ದೀನ-ದಲಿತರ ಹಾಗೂ ಶೋಷಿತ ವರ್ಗದವರ ಹರಿಕಾರ ಆಗಿದ್ದಾರೆ. ಅವರು ಸಮಾಜದ ಹಿತೈಷಿಗಳು ಆಗಿದ್ದರು. ಬಡವರ ಏಳಿಗೆಗಾಗಿ ಪರಿಶ್ರಮಪಟ್ಟಿದಲ್ಲದೇ ಅವರು ಬಡವರು ತಮ್ಮ ಹಕ್ಕುಗಳನ್ನು ಪಡೆಯಲು ಶಿಕ್ಷಣ, ಸಂಘಟನೆ, ಹೋರಾಟವೇ ಮಹಾಮಂತ್ರ ಎಂದು ಜನತೆಗೆ ಕರೆ ಕೊಟ್ಟರು. ಅವರು ನಮ್ಮ ಭವ್ಯ ಭಾರತಕ್ಕೆ ಒಂದು ಮಾದರಿ, ಸಂವಿಧಾನ ಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆಯುವ0ತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವಧಾರ ಗೃಹದ ಸಿಬ್ಬಂದಿಗಳು ಹಾಗೂ ಸಾಂತ್ವನ ಕೇಂದ್ರದ ಸಿಬ್ಬಂದಿ, ಫಲಾನುಭವಿಗಳು ಉಪಸ್ಥಿತರಿದ್ದರು.