ಸ್ವದೇಶಿ ಚಳುವಳಿ ಸ್ವಾವಲಂಬನೆಯ ಸಂಕೇತ


ನವಲಗುಂದ, ಜ 24: ಸ್ವದೇಶಿ ಚಳುವಳಿಯು ಭಾರತೀಯರ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಸಂಕೇತವಾಗಿ, ಭಾರತೀಯರನ್ನು ಸ್ವಾತಂತ್ರ್ಯ ಚಳುವಳಿಗೆ ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರ ಜೊತೆಗೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ಹಾಗೂ ಸ್ವದೇಶಿ ವಸ್ತುಗಳನ್ನು ಬೆಂಬಲಿಸಿ ಭಾರತದ ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿತ್ತು ಎಂದು ಅಣ್ಣಿಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ವಿದ್ಯಾ ಎಸ್ ಹಡಗಲಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಯ್‍ಕ್ಯೂಎಸಿ ಘಟಕದಡಿಯಲ್ಲಿ ಇತಿಹಾಸ ವಿಭಾಗದಿಂದ “ಭಾರತದ ಸ್ವಾತಂತ್ರ್ಯ ಚಳುವಳಿಯ ಮೇಲೆ ಸ್ವದೇಶಿ ಚಳುವಳಿಯ ಪ್ರಭಾವ” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಎಂ.ಬಿ. ಬಾಗಡಿ ಮಾತನಾಡಿ ಸ್ವದೇಶಿ ಚಳುವಳಿಯು ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ಒಂದು ಪ್ರಮುಖ ಆಯುಧವಾಗಿ ಕಾರ್ಯನಿರ್ವಹಿಸಿತು ಎಂದರು.
ಕಾರ್ಯಾಗಾರದಲ್ಲಿ ಡಾ. ಸಂತೋಷ್ ಹುಬ್ಬಳ್ಳಿ, ಪ್ರಸನ್ನ ಪಂಡರಿ, ಡಾ. ಸುಗುಣಾ ಡಿ.ವಿ. ಪ್ರವೀಣ ದೊಡ್ಡಮನಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಾಗಾರದ ಸಂಘಟಕರಾದ ಸವಿತಾ ಚಿಕ್ಕಣ್ಣವರ್ ಸ್ವಾಗತ ಭಾಷಣ ಮಾಡುವುದರೊಂದಿಗೆ ಅತಿಥಿಗಳನ್ನು ಪರಿಚಯಿಸಿದರು, ಶ್ರೀಧರ್ ಲೋನಕರರವರು ನಿರೂಪಿಸಿದರು.