ಸ್ವತಂತ್ರ ಸಂಗ್ರಾಮದಲ್ಲಿ ಪತ್ರಕರ್ತರ ಶ್ರಮ ಅಪಾರ: ಡಾ.ಬಲ್ಲೂರ

ಬೀದರ್:ಜು.21: ಭಾರತ ಮಹಮ್ಮದ್ ಘಜನಿ, ಘೋರಿ, ಪೋರ್ಚುಗೀಸರು, ಡಚ್ಚರು, ಫ್ರೇಂಚರು ನಂತರ ಇಂಗ್ಲಿಷರ ದಾಳಿಗೆ ಜರ್ಜರಿತವಾಗಿತ್ತು. ಬ್ರಿಟಿಷರ ಕಪಿಮುಷ್ಟಿಯಿಂದ ದೇಶ ಪಾರು ಮಾಡಲು ತಿಲಕರ ಆದಿಯಾಗಿ ಆಗಿನ ಪತ್ರಕರ್ತರ ಶ್ರಮ ಬಹಳಷ್ಟಿದೆ ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಅಭಿಪ್ರಾಯ ಪಟ್ಟರು.

ನಗರದ ಐ.ಎಮ್.ಎ ಹಾಲ್‍ನಲ್ಲಿ ರೋಟ್ರಿ ಕ್ಲಬ್ ಬೀದರ್ ವತಿಯಿಂದ ಜರುಗಿದ ಪತ್ರಿಕಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಸ್ವತಂತ್ರ ಸಂಗ್ರಾಮದಲ್ಲಿ ಕೇಸರಿ ಹಾಗೂ ಇತರೆ ಪತ್ರಿಕೆಗಳು ಸ್ವತಂತ್ರ ಹೋರಾಟಗಾರರನ್ನು ಒಗ್ಗೂಡಿಸುವ ಹಾಗೂ ಅವರಲ್ಲಿ ಸ್ಪುರ್ತಿ ತುಂಬುವ ಕಾರ್ಯ ಮಾಡಿದವು. ಸ್ವತಂತ್ರಾ ನಂತರ ದೇಶದ ಅಭಿವೃದ್ಧಿಯಲ್ಲಿ ಪತ್ರಿಕೆಗಳು ಹಾಗೂ ಪತ್ರಕರ್ತರ ಪಾತ್ರ ಬಹಳಷ್ಟಿದೆ. ಇತ್ತೀಚೀನ ಭ್ರಷ್ಟಾಚಾರ ತಗ್ಗುವಿಕೆಯಲ್ಲೂ ಪತ್ರಕರ್ತರ ಶ್ರಯ ಅಷ್ಟಿಷ್ಟಲ್ಲ ಎಂದರು.

ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಮುಂಚೂಣಿ ಯೋಧರಂತೆ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿರುವರು. ಸರ್ಕಾರದ ಯೋಜನೆಗಳು ಜನ ಸಾಮಾನ್ಯರ ಮನೆ ಬಾಗಿಲಿಗೆ ಜೊತೆಗೆ ಅವರ ವೈಫಲ್ಯಗಳನ್ನು ಎತ್ತಿ ಹಿಡಿದು ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಒಳ್ಳೆ ಕಾರ್ಯ ಹಾಗೂ ದೌರ್ಬಲ್ಯಗಳನ್ನು ಜನಮಾನಸಕ್ಕೆ ಪರಿಚಯಿಸುವ ಕಾರ್ಯ ಮಾಡಿದವರು ಮಾಧ್ಯಮದವರು ಎಂದರು.

ಸ್ಪರ್ಧಾತ್ಮಕ ಜಗತ್ತಿನ ಈ ದುಬಾರಿ ದುನಿಯಾದಲ್ಲೂ ಮುದ್ರಣ ಮಾಧ್ಯಮ ತನ್ನ ಪಾವಿತ್ರ್ಯತೆ ಉಳಿಸಿಕೊಂಡು ಮುನ್ನುಗ್ಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಹಾಗೂ ಸಮೂಹ ಮಾಧ್ಯಮಗಳ ಸರಣಿಯಲ್ಲೂ ಮುದ್ರಣ ಮಾಧ್ಯಮ ಎದ್ದು ನಿಂತಿದೆ. ಸಾಹಿತ್ಯವು ಒಂದು ಬಾರಿ ಉದಯಿಸಿದರೆ ಪತ್ರಿಕೆಗಳು ನಿತ್ಯ ನಿರಂತರವಾಗಿ ಹುಟ್ಟುತ್ತಲ್ಲೆ ಇರುತ್ತವೆ. ಅದಕ್ಕಾಗಿ ಎಲ್ಲ ವ್ಯವಸ್ಥೆಗಳೊಇಗಿಂತ ಪತ್ರಿಕಾ ರಂಗ ಅಡಳಿತದ ಶ್ರೇಷ್ಠ ಸಾಧನವಾಗಿದೆ ಎಂದು ಬಲ್ಲೂರ್ ಹೇಳಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಶಿವಕುಮಾರ ಸ್ವಾಮಿ, ವಿಜಯಲಕ್ಷ್ಮೀ, ರಾಜೇಶ ಮುಗಟೆ ಹಾಗೂ ಸಂತೋಷ ಚಟ್ಟಿ ಅವರನ್ನು ಸನ್ಮಾನಿಸಲಾಯಿತು.

ರೋಟ್ರಿ ಕ್ಲಬ್ ಅಧ್ಯಕ್ಷ ಚಂದ್ರಕಾಂತ ಕಾಡಾದಿ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸೋಮಶೇಖರ ಪಾಟೀಲ ಗಾದಗಿ ಸ್ವಾಗತಿಸಿ, ಮಾಜಿ ಅಧ್ಯಕ್ಷ ಸುರೇಶ ಚನಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕೋಶಾಧ್ಯಕ್ಷ ಅನೀಲ ಎ ಮಸೂದಿ ವಂದಿಸಿದರು.

ರೋಟ್ರಿಗಳಾದ ಶಂಕರರಾವ ಕೊಟ್ಟರಕಿ, ಡಾ ಸುಭಾಷ ಕರ್ಪೂರ, ಸುಹಾಸ್ ಸಾಬಡೆ, ನರೇಂದ್ರ ಸಾಂಗವಿ, ಶಿವಶಂಕರ ಕಾಮಶೆಟ್ಟಿ, ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಚಂದ್ರಶೇಖರ ನಿಟ್ಟೂರೆ, ರಂಜೀತ ಪಾಟೀಲ, ನಾಗೇಂದ್ರ ನಿಟ್ಟೂರೆ ಸೇರಿದಂತೆ ಹಲವಾರು ಜನ ಕ್ಲಬ್‍ನ ಸದಸ್ಯರು ಭಾಗವಹಿಸಿದರು.