ಸ್ವತಂತ್ರ ವೀರರ ತ್ಯಾಗ ಬಲಿದಾನದ ಆತ್ಮಾವಲೋಕನ ಅಗತ್ಯ: ಡಿ.ಸಿ ರಾಮಚಂದ್ರನ್.ಆರ್

ಬೀದರ.ಮಾ.25: ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳು ಗತಿಸಿರುವ ಸವಿ ನೆನಪಿಗಾಗಿ ಇಂದಿನಿಂದ ಆಗಸ್ಟ್ 14 ರ ವರೆಗೆ ಜಿಲ್ಲೆಯ ಎಲ್ಲ ಇಲಾಖೆಗಳ ಮುಖಾಂತರ 75 ನೇ ಸ್ವತಂತ್ರೋತ್ಸವದ ಅಮ್ರತ ಮಹೋತ್ಸವ ಕಾರ್ಯಕ್ರಮ ಜರುಗಲಿದ್ದು ಸ್ವತಂತ್ರ ವೀರರ ತ್ಯಾಗ ಬಲಿದಾನವನ್ನು ಎಲ್ಲರು ಆತ್ಮಾವಲೋಕನ ಮಾಡಬೇಕೆಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ತಿಳಿಸಿದರು.
ಇಂದು ನಗರದ ಕೋಟೆ ಅವರಣದಲ್ಲಿ ಜಿಲ್ಲಾಡಾಳಿತ, ಜಿಲ್ಲಾ ಪಂಚಾಯತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ 75ನೇ ಸ್ವತಂತ್ರೋತ್ಸವದ ಅಮೃತ ಮಹೋತ್ಸವದ ಚೊಚ್ಚಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಇಲಾಖೆಗಳು ತಮ್ಮಲ್ಲಿರುವ ಮುಖ್ಯ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಸ್ವತಂತ್ರೋತ್ಸವದ ಅಮೃತ ಮಹೋತ್ಸವ ಅಯೋಜಿಸಿ ಜಿಲ್ಲೆಯ ಸಾರ್ವಜನಿಕರಿಗೆ ಪ್ರಚುರಪಡಿಸಬೇಕು ಎಂದರು.
ಭಾರತ ಸ್ವತಂತ್ರ ಬಂದು 75 ವರ್ಷಗಳು ಗತಿಸಿದರ ಹಿನ್ನೆಲೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು. ಪರಸ್ಪರ ಪ್ರೀತಿ ವಿಶ್ವಾಸದಿಂದ ಒಬ್ಬರಿಗೊಬ್ಬರು ಗೌರವಿಸಬೇಕು. ಪ್ರತಿ ಇಲಾಖೆಗಳ ಯೋಜನೆಗಳನ್ನು ಸಾರ್ವಜನಿಕರ ಮನ ಮುಟ್ಟುವಂತೆ ಬಿತ್ತರಿಸಬೇಕೆಂದು ಡಿ.ಸಿ ಕರೆ ನೀಡಿದರು.
ಜಿಲ್ಲೆಯ ಹಿರಿಯ ಸಾಹಿತಿ ಎಮ್.ಜಿ.ಗಂಗನಪಳ್ಳಿ ಮಾತನಾಡಿ, ಅಂದು ಸ್ವತಂತ್ರ ಸೇನಾನಿಗಳು ಹೋರಾಡಿದರಿಂದಲೇ ಇಂದು ನಾವು ನಿರ್ಭಿಡೆಯಾಗಿದ್ದೇವೆ.ಆದರೆ ಇಂದಿನ ರಾಜಕಾರಣಿಗಳು ಅಧಿಕಾರದ ದಾಹಕ್ಕಾಗಿ ದೇಶದ ಸ್ವತಂತ್ರವನ್ನು ಅಳಿವಿನ ಅಂಚಿಗೆ ಕೊಂಡೊಯ್ಯುತ್ತಿದ್ದಾರೆ. ಈ ದೂರ್ಥ ಸಂಗತಿ ಹೋಗಲಾಡಿಸಬೇಕೆಂದು ಕರೆ ಕೊಟ್ಟರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಹಿರಾ ನಸಿಮ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ನಾಗೇಶ ಡಿ.ಎಲ್, ಸಹಾಯಕ ಆಯುಕ್ತೆ ಗರಿಮಾ ಪನ್ವಾರ್, ಜಿ.ಪಂ ಉಪ ಕಾರ್ಯದರ್ಶಿ ಸೂರ್ಯಕಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಧಿಕಾರಿ ಡಾ.ವ್ವಿ.ಜಿ.ರೆಡ್ಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೀರ, ನೆಹರು ಯುವ ಕೇಂದ್ರದ ಜಿಲ್ಲಾ ಯವ ಅಧಿಕಾರಿ ಮಯೂರಕುಮಾರ, ಜಾನಪದ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ, ವಿಜಯಕುಮಾರ ಸೋನಾರೆ ಸೇರಿದಂತೆ ಜಿಲ್ಲೆಯ ಇತರೆ ಅಧಿಕಾರಿಗಳು, ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.