ಸ್ವತಂತ್ರ ಭಾರತದ ಮೊದಲ ಮತದಾರ ನಿಧನ

ಡೆಹಾಡೂನ್, ನ. ೫- ಸ್ವತಂತ್ರ ಭಾರತದ ಮೊದಲ ಮತದಾರರ ಶ್ಯಾಂ ಸರಣ್ ನೇಗಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ ೧೦೬ ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ನೇಗಿ ಅವರು ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಈ ತಿಂಗಳ ೨ ರಂದು ಅಂಚೆ ಮೂಲಕ ಮತ ಚಲಾಯಿಸಿ ಯುವ ಮತದಾರರಿಗೆ ಮಾದರಿಯಾಗಿದ್ದರು.
೧೯೧೭ರ ಜುಲೈ ೧ ರಂದು ಜನಿಸಿದ್ದ ನೇಗಿ ಕಲ್ಪದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ೧೯೪೭ರಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯದ ನಂತರ ಸ್ವತಂತ್ರ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತ್ತಿತ್ತು. ಈ ವೇಳೆ ನೇಗಿ ಅವರು ೧೯೫೧ ಅಕ್ಟೋಬರ್ ೨೫ ರಂದು ತಮ್ಮ ಮತ ಚಲಾಯಿಸುವ ಮೂಲಕ ಮೊದಲ ಮತದಾರರೆಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
ನೇಗಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಕಿನ್ನೌರ್ ಅಭಿದ್ ಹುಸೇನ್ ಸಂತಾಪ ವ್ಯಕ್ತಪಡಿಸಿದ್ದು ಅವರ ಅಂತ್ಯಕ್ರಿಯೆಗೆ ಜಿಲ್ಲಾಡಳಿತದಿಂದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.