ಸ್ವತಂತ್ರ ನಿರ್ದೇಶಕರಾಗಿ ನೇಮಕ

ಬೆಂಗಳೂರು,ಜ.೫ -ವ್ಯವಸ್ಥಿತ ಮಹತ್ವದ ಠೇವಣಿ ಸ್ವೀಕರಿಸದ, ಬ್ಯಾಂಕೇತರ ಹಣಕಾಸು ಕಂಪನಿ ಕ್ರೇಝ್ಬೀ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನ ಸ್ವತಂತ್ರ ನಿರ್ದೇಶಕರನ್ನಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಜಿ.ಗೋಪಾಲಕೃಷ್ಣ ಅವರನ್ನು ನೇಮಕ ಮಾಡಲಾಗಿದೆ.
ವೃತ್ತಿಜೀವನದಲ್ಲಿ ದೇಶದ ಕೇಂದ್ರೀಯ ಬ್ಯಾಂಕ್ ಆದ ಭಾರತೀಯ ರಿಸರ್ವ್ಬ್ಯಾಂಕಿನಲ್ಲಿ ೩೩ ವರ್ಷಗಳ ಕಾಲ ವಿವಿಧ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಿದ ಗೋಪಾಲಕೃಷ್ಣ , ೨೦೧೪ರಲ್ಲಿ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಿವೃತ್ತರಾಗಿದ್ದರು.
ಎನ್ಬಿಎಫ್ಸಿ ಹಾಲಿ ನಿರ್ದೇಶಕ ವಿವೇಕ್ ವೇದ, ಆಡಳಿತ ಮಂಡಳಿಗೆ ಜಿ.ಗೋಪಾಲಕೃಷ್ಣ ಅ ಸೇರಿರುವುದು ಅತೀವ ಆನಂದ ತಂದಿದೆ. ಅವರ ಪ್ರಬಲ ಮೇಲ್ವಿಚಾರಣೆ ಮತ್ತು ನಿಯಂತ್ರಣಾತ್ಮಕ ಹಿನ್ನೆಲೆ ಹಾಗೂ ಹಣಕಾಸು ಉದ್ಯಮದಲ್ಲಿ ಇರುವ ಮಹತ್ವದ ಅನುಭವವು, ಎಲ್ಲ ಸಂಬಂಧಿತ ಹಕ್ಕುದಾರರಿಗೆ, ಗ್ರಾಹಕರಿಗೆ ಸಾಲ ನೀಡುವ ವಿಶ್ವಾಸಾರ್ಹ ಮತ್ತು ಸಾಧನಾಮುಖಿ ಎನ್ಬಿಎಫ್ಸಿಯಾಗುವ ಮಹತ್ವಾಕಾಂಕ್ಷೆಯನ್ನು ಸಾಧಿಸುವಲ್ಲಿ ನೆರವಾಗಲಿದೆ” ಎಂದು ಹೇಳಿದ್ದಾರೆ.
ಜಿ.ಗೋಪಾಲಕೃಷ್ಣ, ಮಾತನಾಡಿ”ವಿತ್ತೀಯ ಸೇರ್ಪಡೆಯು ಭಾರತದಲ್ಲಿ ವೈವಿಧ್ಯಮಯ ಸ್ವರೂಪವನ್ನು ಹೊಂದಿದ್ದು, ಇಂದಿನ ಅಗತ್ಯತೆಯಾಗಿದೆ. ಕ್ರೇಝಿಬೀ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬ್ಯಾಂಕಿಂಗ್ ಸಂಸ್ಥೆಗಳು ಮತ್ತು ಸಾಂಪ್ರದಾಯಿಕ ಎನ್ಬಿಎಫ್ಸಿಗಳು ಸೇವೆ ಒದಗಿಸದ ಗ್ರಾಹಕರಿಗೆ ಸಾಲಸೌಲಭ್ಯವನ್ನು ವಿಸ್ತರಿಸುವ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ ಒಂದು ಸಾಮಾಜಿಕ ಸಂವೇದನಾಶೀಲತೆ ಹೊಂದಿದ ಸಂಸ್ಥೆ ಮಾತ್ರವಾಗಿರದೇ, ತಮ್ಮ ವಹಿವಾಟನ್ನು ನಿರ್ವಹಿಸುವ ಮತ್ತು ಕಾರ್ಯಾಚರಣೆ ನಡೆಸುವ ಸಂಯಮ ಕೂಡಾ ನನಗೆ ತೀರಾ ಮೆಚ್ಚುಗೆಯಾಗಿದೆ” ಎಂದು ಬಣ್ಣಿಸಿದ್ದಾರೆ.