ಸ್ವತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ಟಿಳಕ ಮತ್ತು ಚಂದ್ರಶೇಖರ ಆಜಾದರ ಜಯಂತಿ ಆಚರಣೆ

ವಿಜಯಪುರ, ಜು.25-ನಗರದ ಸಿಕ್ಯಾಬ ಮಹಿಳಾ ಮಹಾವಿದ್ಯಾಲಯದ ಇತಿಹಾಸ ವಿಭಾಗದಿಂದ ಸ್ವತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ಟಿಳಕ ಮತ್ತು ಚಂದ್ರಶೇಖರ ಆಜಾದರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಭಾದ ಮುಖ್ಯಸ್ಥರಾದ ಡಾ. ಮುಸ್ತಾಕ ಅಹ್ಮದ. ಇನಾಮದಾರ ಅವರು ವಿಶೇಷ ಉಪನ್ಯಾಸ ನೀಡುತ್ತಾ ಬಾಲ ಗಂಗಾಧರ ಟಿಳಕರು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿ ಸಂಪ್ರದಾಯಸ್ಥ ಬ್ರಾಹ್ನಂ ಕುಟುಂದಲ್ಲಿ 1856 ಜುಲೈ 23 ರಂದು ಜನಿಸಿದರು. ಬಾಲ್ಯದಲ್ಲಿಯೇ ಮಾತಾಪಿತೃಗಳನ್ನು ಕಳೆದುಕೊಂಡು ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದರು. ಪ್ರತಿಭಾವಂತರಾದ ಇವರು ಸಂಸ್ಕøತ ಮತ್ತು ಗಣಿತಶಾಸ್ತ್ರಗಳಲ್ಲಿ ಪರಿಣತರಾದರು. 1879 ಕಾನೂನು ಪದವಿ ಪಡೆದರು.
ಟಿಳಕರು ಜನ್ಮತಃ ಹೋರಾಟಗಾರರಾಗಿದ್ದು ಅಸಾಧಾರಣ ಧೀಶಕ್ತಿ ಹಾಗೂ ಪಾಂಡಿತ್ಯ, ಕ್ರಿಯಾಶೀಲತೆ, ದೇಶಾಭಿಮಾನ ಇವರು ವಿಶೇಷ ಗುಣಗಳಾಗಿದ್ದವು. ಜನತೆಯಲ್ಲಿ ರಾಜಕೀಯ ಪ್ರಜ್ಞೆ ಹಾಗೂ ದೇಶಾಭಿಮಾನವನ್ನು ಮುಡಿಸುವ ಉದ್ದೇಶದಿಂದ ಇವರು “ಕೇಸರಿ” ಮತ್ತು “ಮರಾಠ” ಎಂಬ ಪತ್ರಿಕೆಗಳನ್ನು ಆರಂಭಿಸಿ ತಮ್ಮ ತೀಕ್ಷಣವಾದ ಬರವಣಿಗೆಯ ಮೂಲಕ ಬ್ರಿಟಿಷರ ದಬ್ಬಾಳಿಕೆ, ಅನ್ಯಾಯ, ಶೋಷಣೆ ಹಾಗೂ ವಂಚನೆಗಳನ್ನು ಬಯಲಿಗೆಳೆದರು. ತಮ್ಮ ಪ್ರಚೋದಕ ಲೇಖನಗಳ ಮೂಲಕ ಪ್ರಾಚೀನ ಭಾರತೀಯ ಸಂಸ್ಕøತಿಯ ಹಿರಿಮೆಯನ್ನು ತೋರಿಸಿಕೊಟ್ಟರು ಮತ್ತು ಗಣೇಶೋತ್ಸವ ಹಾಗೂ ಶಿವಾಜಿ ಜಯಂತಿ ಉತ್ಸವಗಳನ್ನು ಏರ್ಪಡಿಸಿ ಸ್ವತಂತ್ರ್ಯ ಚಳವಳಿಯ ಕಾರ್ಯಚಟವಟಿಕೆಗಳನ್ನು ರೂಪಿಸುತ್ತಿದ್ದರು. ಭಾರತದ ರಾಷ್ಟ್ರೀಯ ಆಂದೋಲವನ್ನು ಜನತಾ ಚಳವಳಿಯನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಟಿಳಕರಿಗೆ ಸಲ್ಲುತ್ತದೆ ಇಂತಹ ಮಹಾನ ಸ್ವತಂತ್ರ ಹೋರಾಟಗಾರನ್ನು ನೆನಹುವುದ ನಮ್ಮೆಲ್ಲರ ಕರ್ತವ್ಯೆವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಮೊಹ್ಮದ ಆಪ್ಜಲ್ ಅವರು ಮಾತನಾಡುತ್ತ ಇನೋರ್ವ ಸ್ವತಂತ್ರ್ಯ ಹೋರಾಟಗಾರರಾದ ಚಂದ್ರೆಶೇಖರ ಆಜಾದರು ಜುಲೈ 23 1906 ರಲ್ಲಿ ಮಧ್ಯಪ್ರದೇಶದ ಭವರಾದಲ್ಲಿ ಜನಿಸಿದರು ಇವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮೀಸಲಿಟ್ಟರು ಹಾಗೂ ನೌಜವಾನ ಭಾರತ ಸಭಾ, ಕೀರ್ತಿ ಕಿಸಾನ ಪಾರ್ಟಿ ಗಳನ್ನು ಸ್ಥಾಪಿಸಿ ಸ್ವತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ದೇಶ ಈಗ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸ್ವತಂತ್ರ್ಯ ಹೋರಾಟಗಾರನ್ನು ಸ್ಮರಿಸುವುದು ಹಾಗೂ ಅವರ ವೀರಗಾತೆಯನ್ನು ಯುವ ಜನಾಂಗಕ್ಕೆ ಮನವರಿಕೆ ಮಾಡಕೊಡುವುದು ನಮ್ಮೆಲ್ಲರ ಕರ್ತವ್ಯೆವಾಗಿದೆಂದರು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯರಾದ ಎಂ.ಟಿ.ಕೊಟ್ನಿಸ್, ಡಾ. ಎಸ್. ಎಚ್.ಮಲಘಾಣ, ಪ್ರೋ. ಎಚ್.ವಾಯ್. ಯಡಹಳ್ಳಿ, ಪ್ರೋ. ಗಂಗಾಧರ ಭಟ್ಟ, ಡಾ. ಎಂ.ಎಸ್.ಮೈತ್ರಿ. ಪ್ರೋ. ಹಸನ್ ಖಾದ್ರಿ, ಡಾ. ಎಲ್. ಆಯ್. ನಧಾಫ, ಡಾ. ಚಿದಾನಂದ, ಡಾ. ಗಿರೀಶ ಲೇಡಿ, ಡಾ. ಮೊಹಮ್ಮದ ಸಮೀವುದ್ದೀನ್ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು.