ಸ್ವತಂತ್ರ್ಯ ಸೇನಾನಿಗಳ ಸ್ಮರಣೆಗಳಿಂದ ಸಾಮಾಜಿಕ ಕಾರ್ಯ ಶ್ಲಾಘನೀಯ:ಸಂಸದ ರಾಜಾ ಅಮರೇಶ್ವರ ನಾಯಕ

ಶಹಾಪುರ:ಜ.9:ಸ್ವತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿಕೊಂಡು ಪ್ರಾಣರ್ಪಣೆಗಳನ್ನು ಮಾಡಿ ಹೈದ್ರಾಬಾದ ನಿಜಾಮರ ಆಡಳಿತದಿಂದ ಮುಕ್ತಿಪಡಿಸಿಕೊಂಡು, ಅಖಂಡ ರಾಜ್ಯ ಏಕಿಕರಣಕ್ಕೆ ಸಾಕ್ಷಿಯಾದ ಸ್ವತಂತ್ರ್ಯ ಯೋದರ ಸ್ಮರಣೆಗಳ ಸವಿ ನೆನಪಿನಲ್ಲಿ, ಸಾಮಾಜಿಕ ಆರೋಗ್ಯ ಭಾಗ್ಯಗಳನ್ನು ನೀಡಿ, ರ್ದುಲರ ಬಡವರ ಬಾಳಿಗೆ ಬೆಳಕಾದ ಸ್ವತಂತ್ರ್ಯ ಸೇನಾನಿ ದಿ,ಅಚ್ಚಪ್ಪಗೌಡ ಸುಬೇದಾರವರ ಕುಟುಂಸ್ಥರ ಕಾರ್ಯ ಶ್ಲಾಘನೀಯವಾದದ್ದು ಎಂದು ರಾಯಚೂರ ಸಂಸದ ರಾಜಾ ಅಮರೇಶ್ವರ ನಾಯಕ ಗುಣಗಾನ ಮಾಡಿದರು. ಅವರು ನಗರದಲ್ಲಿ ನಿನ್ನೆ ನಡೆದ ದಿ,ಅಚ್ಚಪ್ಪಗೌಡ ಸುಬೇದಾರ ರೂರಲ್ ಹಾಗೂ ಅರ್ಭನ ಟ್ರಷ್ಟಿನ 5 ನೇಯ ವಾರ್ಷಿಕೊತ್ಸವವನ್ನು ಉಧ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಆಡಳಿತವಧಿಯಲ್ಲಿ ಸಂಸದರಾಗಿ ಈ ಭಾಗಕ್ಕೆ ಅನೇಕ ಜನಪರ ಯೋಜನೆಗಳ ಮುಖಾಂತರ ಅಭಿವೃದ್ದಿಗೊಳಿಸಲಾಗುತ್ತಿದೆ. ಪ್ರಧಾನಿ ಮೋದಿಜೀಯವರ ಮತ್ತು ಮಂತ್ರಿಗಳಾದ ಗಡ್ಕರಿ ಶಾಹಾ,ರವರ ಸಚಿವ ಸಂಪುಟದಲ್ಲಿ ನಮ್ಮ ಕಾರ್ಯಗಳು ಸಾಂಗೋಪವಾಗಿ ಸಾಗುತ್ತಿವೆ,ಎಂದು ನೆನೆದ ಸಂಸದ ರಾಜಾ ಅಮರೇಶ್ವರ ನಾಯಕರವರು, ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೊಂಡಿದ್ದು 150 ಜನ ವಿಧ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಅಭ್ಯಾಸ ಮಾಡುವಂತಾಗಿದೆ. ಎಂದು ಅವರು ತಿಳಿಸಿದರು. ಸಮಾರಂಭದ ದಿವ್ಯ ಸಾನಿಧ್ಯವನ್ನು ಮಾಹಾತ್ಮ ಚರಬಸವೇಶ್ವರ ಸಂಸ್ಥಾನದ ಪೂಜ್ಯ ವೆ, ಬಸವಯ್ಯ ಶರಣರು. ಶ್ರೀ ಪಕೀರೇಶ್ವರ ಮಠದ ಪೂಜ್ಯ ಗುರುಪಾದ ಮಾಹಾಸ್ವಾಮೀಗಳು ವಹಿಸಿ ಆಶ್ರೀಚನ ನೀಡಿದರು. ಕರ್ನಾಟಕ ರಾಜ್ಯ ಒಳಚರಂಡಿ ಮಂಡಳಿ ಅಧ್ಯಕ್ಷರು ಸುರುಪುರ ಶಾಸಕರಾದ ರಾಜುಗೌಡರು ಆರೋಗ್ಯ ಶಿಬಿರ ಉಧ್ಘಾಟಿಸಿದರು. ಕರ್ನಾಟಕ ರಾಜ್ಯ ಅಲೆಮಾರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ದೇವಿಂದ್ರ ನಾದಾ ಆಗಮಿಸಿದ್ದರು. ಊಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ.ಶಾಸಕರಾದ ಗುರು ಪಾಟೀಲ್ ಶಿರವಾಳರವರು ಮಾತನಾಡಿ ಸ್ವತಂತ್ರ್ಯ ದೊರಕಿಸುವಲ್ಲಿ ಪ್ರಾಣ ತ್ಯಾಗ ಮಾಡಿದ ಸ್ವತಂತ್ರ್ಯಯೋದರು ಇಂದು ನಮ್ಮಗಳ ಬದುಕಿಗೆ ಮಾದರಿಯಾಗಿದ್ದರೂ. ಮುಂದಿನ ದಿನಮಾನಗಳನ್ನು ಸ್ವತಂತ್ರ್ಯ ಭಾರತದ ಅಭ್ಯುಧ್ಯಯಕ್ಕೆ ಮುಂದಾಗಬೇಕಿದೆ. ಸ್ವತಂತ್ರ್ಯಯೋದರ ಕುಟುಂಬ ಇಂದು ಆರೋಗ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಿರುವದು ಅತ್ಯಂತ ಮಹತ್ವದ್ದಾಗಿದೆ. ಕಳೆದ 5ವರ್ಷಗಳಿಂದ ಉಚಿತ ಸೇವೆಯೊಂದಿಗೆ ಬಡವರ ಮನೆ ಬಾಗಿಲಲ್ಲಿ ಚಿಕಿತ್ಸೆ ನೀಡುತ್ತಿರುವದ ನಮ್ಮಗಳ ಭಾಗ್ಯವಾಗಿದೆ, ವೈಧ್ಯಕೀಯ ಸೇವೆ ನಿತ್ಯ ನಿರಂತರವಾಗಲಿ ಎಂದು ಆಶಿಸಿದರು. ಎಮ್,ಎಲ್,ಸಿ, ಬಿ,ಜಿ,ಪಾಟೀಲ್, ಮಾಜಿ ಎಮ್.ಎಲ್,ಸಿ, ಅಮಾತೆಪ್ಪ ಕಂದಕೂರ ಮಾತನಾಡಿದರು. ಈ ಸಂಧರ್ಭದಲ್ಲಿ ದಿ,ಅಚ್ಚಪ್ಪಗೌಡ ಸುಬೇದಾರವರ ಬದುಕು ಜೀವನ ಕುರಿತು ಕೃತಿಯನ್ನು ಲೊಕಾರ್ಪಣೆಗೊಳಿಸಲಾಯಿತು.ಕೃತಿಯ ಕತೃ ಸಾಹಿತಿ ಸಿದ್ರಾಮ ಹೊನಕಲ್ ರವರು ಕೃತಿ ಕುರಿತು ವಿಶ್ಲೇಷಣೆ ಮಾಡಿದರು. ಮಾಜಿ ಎಮ್,ಎಲ್,ಸಿ, ಅಮರಾಥ ಪಾಟೀಲ್. ಮಾಜಿ ಶಾಸಕರಾದ ದೊಡಪ್ಪಗೌಡ ನರಬೋಳಿ, ಯಾದಗಿರಿ ಶಾಸಕರಾದ ವೆಂಕಟರಡ್ಡಿ ಮುದ್ನಾಳ. ಬಿಜೆಪಿ ಜಿಲ್ಲಾಧ್ಯಕ್ಷರಾದ ಡಾ,ಶರಣಬೂಪಾಲರಡ್ಡಿ, ಡಾ,ಮಲ್ಲಣಗೌಡ ಉಕ್ಕಿನಾಳ ರಾಜ್ಯ ಬಿಜೆಪಿ ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರಗೌಡ ಮಾಗನೂರ. ರಾಜು ಗೂಗಲ್ ನಗನೂರ, ಅಡಿವೆಪ್ಪಾ ಜಾಕಾ. ಬಸವರಜಪ್ಪಗೌಡ ವಿಬೂತಿಹಳ್ಳಿ, ಅಮರೇಶ ವಿಬೂತಿಹಳ್ಳಿ, ಸಣ್ಣ ಮಾನಯ್ಯ ಹಾದಿಮನಿ, ಲಾಲಹಮ್ಮದ ಕುರೇಶಿ. ಕಾಂತು ಪಾಟೀಲ್. ರಮೇಶ ಕೊಡಗನೂರ. ಶರಣಪ್ಪ ಯಾಳಗಿ, ರಾಮಚಂದ್ರ ಕಾಶಿರಾಜ,ತಾಹೇರಪಾಷಾ, ಶಿವರಾಜ ದೇಶಮುಖ್. ಗೌಡಪ್ಪಗೌಡ ರಬನಳ್ಳಿ ಸೇರಿದಂತೆ ನೂರಾರು ಜನ ಗಣ್ಯರು ಹಿರಿಯರು ಆಗಮಿಸಿದ್ದರು. 5001 ಜನ ಮೈತೈದೆಯರಿಗೆ ಊಡಿ ತುಂಬಲಾಯಿತು. ಬಿಜೆಪಿ ಯುವ ಮುಖಂಡರಾದ ಶ್ರೀಕಾಂತ ಸುಬೇದಾರ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಡಾ, ಚಂದ್ರಶೇಖರ ಸುಬೇದಾರ ರವರು ತಮ್ಮ ವೈಧ್ಯಕೀಯ 35 ವಸಂತ ಐತಿಹಾಸಿಕ ಕ್ಷಣಗಳನ್ನು ನೆನೆಪಿಸಿಕೊಂಡರು. ಟ್ರಷ್ಟಿನ ಕಾರ್ಯದರ್ಶಿಗಳಾದ ಕರಣ ಸುಬೇದಾರವರು ವಂದಿಸಿದರು. ಈ ಸಮಾರಂಭಕ್ಕೆ ಸಾವಿರಾರು ಜನ ಮಹಿಳೆಯರು ಮತ್ತು ಜನರು ಆಗಮಿಸಿದ್ದರು.