ಸ್ವಚ್ಛ ಸುಂದರ ಪರಿಸರ ನಿರ್ಮಾಣಕ್ಕೆ ಆದ್ಯತೆ : ಶಾಸಕ ಲಕ್ಷ್ಮಣ ಸವದಿ

ಅಥಣಿ : ಜ.14:ಅಥಣಿ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಪುರಾತನ ಮತ್ತು ಐತಿಹಾಸಿಕ ಕೆರೆಗಳ ಅಭಿವೃದ್ಧಿ ಮಾಡಲು ಸರ್ಕಾರದಿಂದ 25 ಕೋಟಿ ರೂಪಾಯಿ ಮಂಜುರಾಗಿದ್ದು, ಅದೇ ರೀತಿ ಪಟ್ಟಣದ ಹೊರವಲಯದಲ್ಲಿ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮಿರಜ ರಸ್ತೆಯ ಫರಸಿಫೂಲ್ ವರೆಗೆ ನಾಲೆಯನ್ನು ಸ್ವಚ್ಛಗೊಳಿಸಿ ಸುವ್ಯವಸ್ಥಿತವಾದ ಚರಂಡಿ ನಿರ್ಮಾಣ ಮಾಡಿ ಮಳೆ ನೀರು ಸರಾಗವಾಗಿ ಸಾಗುವಂತೆ ಮತ್ತು ನೆರೆಹೊರೆಯ ಜನರಿಗೆ ಗಬ್ಬು ವಾಸನೆ ಮತ್ತು ರೋಗರು ಜನಗಳು ಹರಡದಂತೆ ಕ್ರಮ ಕೈಕೊಳ್ಳಲು ಸುಮಾರು 10 ಕೋಟಿ ರೂಪಾಯಿ ಮಂಜುರಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಿ ಸಮಾರು 35 ಕೋಟಿ ರೂ ವೆಚ್ಚದ ಈ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯಾಗಿಸಲು ಶಾಸಕ ಲಕ್ಷ್ಮಣ ಸವದಿಯವರು ಶ್ರಮಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಲಕ್ಷ್ಮಣ ಸವದಿಯವರಿಗೆ ಅಥಣಿ ಪಟ್ಟಣದ ಪುರಸಭೆಯ ಸದಸ್ಯರು ಹಾಗೂ ಸಮಸ್ತ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ ಮಾಜಿ ಡಿಸಿಎಂ ಹಾಗೂ ಶಾಸಕರಾದ ಲಕ್ಷ್ಮಣ ಸವದಿಯವರು ಕ್ಷೇತ್ರದ ಅಭಿವೃದ್ಧಿಯ ಇಚ್ಛಾಶಕ್ತಿಯಿಂದ ಜೋಡು ಕೆರೆಗಳ ಅಭಿವೃದ್ಧಿಗೆ 25 ಕೋಟಿ ರೂ. ಹಾಗೂ ಭಾಗೀರಥಿ ನಾಲಾ (ದಕ್ಕೆ ನಾಲಾ) ಅಭಿವೃದ್ಧಿಗೆ 10 ಕೋಟಿ ರೂ. ಅನುದಾನವು ಸರ್ಕಾರದಿಂದ ಪುರಸಭೆಗೆ ಮಂಜೂರಾಗಿದೆ. ಶಾಸಕರಾದ ಲಕ್ಷ್ಮಣ ಸವದಿಯವರ ಮಾರ್ಗದರ್ಶನದಲ್ಲಿ ಸರ್ಕಾರದಿಂದ ಬಂದ ಅನುದಾನದಲ್ಲಿ ಜೋಡು ಕೆರೆಗಳನ್ನು ರಾಜ್ಯದಲ್ಲಿಯೇ ಮಾದರಿ ಕೆರೆಗಳನ್ನಾಗಿ ಅಭಿವೃದ್ಧಿಗೊಳಿಸಲಾಗುವುದು. ಭಾಗೀರಥಿ ನಾಲಾ (ದಕ್ಕೆ ನಾಲಾ) ವನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಗೊಳಿಸಲಾಗುವುದು ಎಂದರು.