ಸ್ವಚ್ಛ ಸುಂದರ ಗ್ರಾಮಗಳ ಹೊಣೆಗಾರಿಕೆ ಪ್ರತಿಯೊಬ್ಬರದು : ಜಿಪಂ ಸಿ.ಇ.ಓ ಡಾ.ಗಿರೀಶ್ ಡಿ.ಬದೋಲೆ

ಸೇಡಂ,ಸ,23: ಪ್ರತಿಯೊಂದು ಗ್ರಾಮಗಳ ಮುಖ್ಯರಸ್ತೆಗಳಿಂದ ವಿವಿಧ ರಸ್ತೆಗಳಲ್ಲಿ ಹೆಚ್ಚು ಕಸ ಇರುವುದರಿಂದ ರಸ್ತೆ ಬದಿಯಲ್ಲಿ ತಿರುಗಾಡುವ ಜನರ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿರುವದರಿಂದ ಹೆಚ್ಚು ಹಳ್ಳಿಗಳು ಅಭಿವೃದ್ಧಿ ಕಾಣದೆ ಕುಂಠಿತವಾಗುತ್ತಿವೆ ಎಂದು ಜಿಲ್ಲಾ ಪಂಚಾಯತ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಹೇಳಿದರು.

ತಾಲೂಕಿನ ಮಳಖೇಡ ಗ್ರಾಮದಲ್ಲಿಂದು ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸ್ವಚ್ಛ ಭಾರತ ಮಿಷನ್ ಮತ್ತು ಸ್ವಚ್ಛತಾ ಹಿ ಸೇವಾ ಅಭಿಯಾನ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸ್ವಚ್ಛ ಸುಂದರ ಗ್ರಾಮಗಳನ್ನಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಹೊಣೆಗಾರಿಕೆ ಇರುವುದರ ಜೊತೆಗೆ ಹೆಚ್ಚಿನದಾಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು ಸರ್ವ ಸದಸ್ಯರು
ಕರ್ತವ್ಯವಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು
ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿಯಿಂದ ರಾಷ್ಟ್ರಕೂಟರ ಕೋಟೆಯ ಆಂಜನೇಯ ವರೆಗೆ ಸ್ವಚ್ಛತಾ ಹಿ ಸೇವಾ ಅಭಿಯಾನ ಜಾಗೃತಿ ಜಾತ ಹಮ್ಮಿಕೊಳ್ಳಲಾಯಿತು.

ಈ ವೇಳೆಯಲ್ಲಿ ತಾಲೂಕು ಪಂಚಾಯಿತಿಗೆ ಕಾರ್ಯನಿರ್ವಾಹಕ ಅಧಿಕಾರಿ ಶಂಕರ್ ರಾಥೋಡ್, ತಾಲೂಕ ಆರೋಗ್ಯ ಅಧಿಕಾರಿ ಡಾ.ರಾಕೇಶ್ ಕಾಂಬಳೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ವಿಜಯಕುಮಾರ್ ಯಾದಗಿರಿ, ಜಿಲ್ಲಾ ಪಂಚಾಯತ್ ಅಧಿಕಾರಿ ಹನುಮಪ್ಪ, ಅನಿಲಕುಮಾರ, ಸಿಡಿಪಿಓ ಗೌತಮ್ ಕೆ ಸಿಂದೆ, ಗ್ರಾಮ ಪಂಚಾಯತಿಯ ಸದಸ್ಯರಾದ ಜಮಿಲ್ ಅಲ್ಲಂಪುರಿ, ಶರಣು, ಬಿಜೆಪಿ ಯುವ ಮುಖ ಗುರುರಾಜ ತಳಕಿನ, ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತೆಯರು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.

ತಾಲೂಕಿನಲ್ಲಿ ಪ್ರತಿಯೊಂದು ಹಳ್ಳಿಯೂ ಸ್ವಚ್ಛ ಸುಂದರವನ್ನಾಗಿ ಮಾಡಿಕೊಳ್ಳಲು ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಅದರ ಜೊತೆಗೆ ನಾನು ಕೂಡ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳು ಗಮನಹರಿಸುತ್ತಿದ್ದೇನೆ.

ಶಂಕರ್ ರಾಥೋಡ್
ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸೇಡಂ