ಸ್ವಚ್ಛ ಸಮೃದ್ಧ ಪರಿಸರದಲ್ಲಿ ನಮ್ಮ ಬದುಕು ಇರಲಿ

ಹರಿಹರ.ಜೂ.6; ಸ್ವಚ್ಛ ಸಮೃದ್ಧ ಪರಿಸರದಲ್ಲಿ ನಮ್ಮ ಬದುಕು ಜೀವನ ಸಾಗಿಸುವುದಕ್ಕೆ ಮುಂದಾಗಬೇಕೆಂದು ಮಾಜಿ ಶಾಸಕ ಬಿಪಿ ಹರೀಶ್ ಹೇಳಿದರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ದಾವಣಗೆರೆ ಹರಿಹರ ಬೈಪಾಸ್ ರಸ್ತೆಯಲ್ಲಿ ಗಿಡಗಳ ನೆಟ್ಟು  ಮಾತನಾಡಿದ ಅವರು ಮನುಷ್ಯ ಪ್ರಾಣಿ ಪಕ್ಷಿ ಹಾಗೂ ಜೀವ ಸಂಕುಲ ಬದುಕಲು ಆಮ್ಲಜನಕ ಬೇಕು ಆಮ್ಲಜನಕವು ಉತ್ಪತ್ತಿಯಾಗಲು ಗಿಡ ಮರ ಬೇಕು ಆದ್ದರಿಂದ ಗಿಡಮರ ಬೆಳೆಸಿ ಪರಿಸರ ಉಳಿಸಿ ಹಸಿರೇ ಉಸಿರು ಎಂಬಂತೆ  ಜೀವನ ದರ್ಶನ ಮಾಡಿದರೆ ನಮ್ಮ ಬದುಕು ಉತ್ತಮವಾಗಿರುತ್ತದೆ ಎಂದರು ಹಸಿರೇ ಉಸಿರು ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎಂದು ವಿಶ್ವ ಪರಿಸರ ದಿನಾಚರಣೆಯ ಎಲ್ಲರಿಗೂ ಶುಭಾಶಯಗಳನ್ನು ಕೋರಿದರು ಸರ್ವೋದಯ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ .ನಗರಸಭಾ ಅಧ್ಯಕ್ಷೆ ರತ್ನಮ್ಮ ಡಿ ಉಜ್ಜಿಶ.ಉಪ ಅಧ್ಯಕ್ಷ ಬಾಬುಲಾಲ್ .ನಗರಸಭೆಯ ಪೌರಾಯುಕ್ತೆ ಎಸ್ ಲಕ್ಷ್ಮಿ .ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ. ಚಂದ್ರಶೇಖರ್ ಪೂಜಾರ್ .ನಗರದ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್ ಪಿ ಬಸವರಾಜ್ ಸದಸ್ಯ ಗಾಳದ ರವಿ ಸಿಂಗ್ ಹಾಗೂ ಲಯನ್ಸ್ ಕ್ಲಬ್ಬಿನ ಸದಸ್ಯರುಗಳು ಚುನಾಯಿತ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಯವರು ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ್ದರು