ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಬನಶಂಕರಿ ಶಾಲೆ ಆಯ್ಕೆ

ಬಾದಾಮಿ,ಆ1: ರಾಜ್ಯಮಟ್ಟದ ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ತಾಲೂಕಿನ ಬನಶಂಕರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ, ರಾಜ್ಯದ 34 ಜಿಲ್ಲೆಗಳಿಂದ 26 ಶಾಲೆಗಳನ್ನು ರಾಜ್ಯಮಟ್ಟದ ಸ್ವಚ್ಚ ವಿದ್ಯಾಲಯಕ್ಕೆ ಆಯ್ಕೆ ಮಾಡಲಾಗಿದ್ದು, ಸ್ವಚ್ಚ ವಿದ್ಯಾಲಯಕ್ಕೆ ಆಯ್ಕೆಯಾದ ಬಾದಾಮಿ ತಾಲೂಕಿನ ಪ್ರಥಮ ಶಾಲೆಯಾಗಿದೆ.
ರಾಜ್ಯಮಟ್ಟದ ಸ್ವಚ್ಚ ವಿದ್ಯಾಲಯ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಬನಶಂಕರಿ ಶಾಲೆ ತಾಲೂಕಿಗೆ ಹೆಮ್ಮೆಯ ವಿಷಯವಾಗಿದ್ದು, ಸದರಿ ಶಾಲೆಯ ಮುಖ್ಯಶಿಕ್ಷಕಿ ಪಿ.ಎನ್.ಚಳಗೇರಿ, ಸಹಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ.ಪದಾಧಿಕಾರಿಗಳನ್ನು ಸಾಶಿಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಡೈಟ್ ಪ್ರಾಚಾರ್ಯ ದೊಡ್ಡಬಸಪ್ಪ ನೀರಲಕೇರಿ, ಡಿವೈಪಿಸಿ(ಗುಣಮಟ್ಟ) ಶ್ರೀಮತಿ ಜಾಸ್ಮೀನ್ ಕಿಲ್ಲೆದಾರ, ಡಿವೈಪಿಸಿ(ಕಾರ್ಯಕ್ರಮ) ಸಿ.ಆರ್.ಓಣಿ, ಸಹಾಯಕ ಸಮನ್ವಯಾಧಿಕಾರಿ ಎಸ್.ಕೆ.ಕಲ್ಲೂರ, ಬಿಇಒ ಆರೀಫ್ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನವರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.