ಸ್ವಚ್ಛ ಭಾರತ ಅಭಿಯಾನ, ಆರೋಗ್ಯ-ಅರಿವು ಕಾರ್ಯಕ್ರಮ

ಮೈಸೂರು, ನ.21: ನಗರದ ಕೆ.ಆರ್.ಎಸ್ ರಸ್ತೆಯಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಇಂದು ಸ್ವಚ್ಛ ಭಾರತ ಅಭಿಯಾನ, ಆರೋಗ್ಯ-ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೈಸೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಸಹಯೋಗದ `ಕಾಯಕಲ್ಪ’ ಕಾರ್ಯಕ್ರಮದಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ವಚ್ಛತಾ ಕಾರ್ಯಕ್ರಮಕ್ಕೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಚಾಲನೆ ನೀಡಿದರು. ಔಷಧಿ ಸಸ್ಯ ನೆಡುವುದು ಮತ್ತು ಆರೋಗ್ಯ-ಅರಿವು ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಜಿ.ಹೇಮಂತ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮೈಸೂರು ವಿವಿ ಕುಲಸಚಿವ ಪೆÇ್ರ.ಆರ್.ಶಿವಪ್ಪ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶ್ರುಶ್ರೂಷಕ ವಿಭಾಗದ ಅಧೀಕ್ಷಕ ಕೆ.ಹರೀಶ್ ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ವಾಣಿ , ಮೈಸೂರು ವಿವಿ ರಾ.ಸೆ.ಯೋ, ಇ.ಟಿ.ಐ. ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ.ಸುರೇಶ, ಮಹಾರಾಣಿ ಕಾಲೇಜು ರಾ.ಸೇ.ಯೋ ಕಾರ್ಯಕ್ರಮಾಧಿಕಾರಿ ಪೆÇ್ರ.ಎಂ.ಎಸ್.ಮನೋನ್ಮಣಿ, ಡಾ.ಜಿ.ರಾಘವೇಂದ್ರ, ಡಾ.ಚಂದ್ರಕುಮಾರ್, ಡಾ.ಸರಿತಾ, ಡಾ.ಆರ್.ನಿಂಗರಾಜು ಉಪಸ್ಥಿತರಿದ್ದರು.