ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ ಗೋಡೆ ಬರಹ ಸ್ಪರ್ಧೆ ನೊಂದಣಿ ಅವಧಿ ಎ 4 ರ ವರೆಗೆ ವಿಸ್ತರಣೆ

ಬಳ್ಳಾರಿ,ಮಾ.30: ಮಹಾನಗರ ಪಾಲಿಕೆಯು ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನವನ್ನು ಕೈಗೊಂಡಿದ್ದು, ಸಾರ್ವಜನಿಕರು ಸಹ ಈ ಅಭಿಯಾನದಲ್ಲಿ ಭಾಗವಹಿಸಿ ನಗರವನ್ನು ಸ್ವಚ್ಚತೆಯಿಂದ ಕಾಪಾಡುವ ದೃಷ್ಟಿಯಿಂದ ಗೋಡೆ ಬರಹ ಸ್ಪರ್ಧೆ ಏರ್ಪಡಿಸಿದೆ. ಆಸಕ್ತಿಯುಳ್ಳವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಗೆ ಸಾರ್ವಜನಿಕರನ್ನು ಹೆಸರನ್ನು ನೊಂದಾಯಿಸಿಕೊಳ್ಳಲು ಮಾ.23 ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು; ಹೆಚ್ಚಿನ ಜನರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಏ.4ರವರೆಗೆ ನೊಂದಣಿ ದಿನಾಂಕವನ್ನು ವಿಸ್ತರಿಸಲಾಗಿದೆ.
ನೋಂದಾಯಿಸಿದವರು ಏ.4ರಂದು ಇಲ್ಲಿನ ಗಾಂಧಿನಗರದ ವಾಟರ್ ಬೂಸ್ಟರ್ ಪಾರ್ಕ್‍ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ನೋಂದಾಯಿತ ಸ್ಪರ್ಧಿಗಳು ತಮಗೆ ಬೇಕಾದ ಬಣ್ಣವನ್ನು ತಾವೇ ತರಬೇಕಾಗಿದೆ. ಸ್ಪರ್ಧೆ ನಡೆಯುವ ದಿನವೇ ವಿಜೇತರನ್ನು ಘೋಷಿಸಿ ಬಹುಮಾನವನ್ನು ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಷಯಗಳು:
ಸ್ವಚ್ಚ ಮತ್ತು ಹಸಿರು ಬಳ್ಳಾರಿ, ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧ, ತ್ಯಾಜ್ಯ ವಿಭಜನೆ, ಮಲವಿಸರ್ಜನೆ ಮುಕ್ತ (ಒಡಿಎಫ್) ನಗರ ವಿಷಯಗಳ ಬಗ್ಗೆ ಗೋಡೆ ಬರಹವನ್ನು ಬಿಡಿಸಬೇಕು. ಮೊದಲ ಬಹುಮಾನ 6 ಸಾವಿರ ರೂ. ದ್ವಿತೀಯ ಬಹುಮಾನ 4 ಸಾವಿರ ರೂ.ಗಳಾಗಿರುತ್ತದೆ. 12 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 25 ವರ್ಷದೊಳಗಿನವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಬುದಾಗಿದೆ. ತಮ್ಮ ಗುರುತಿನ ಚೀಟಿ ತರಬೇಕು, ಸ್ಪರ್ಧಿಗಳು ತಮ್ಮದೇ ಆದ ಪೇಂಟ್ ಟೂಲ್ ಅನ್ನು ಅವರೇ ತರಬೇಕು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವವರು ಏ.2 ರೊಳಗೆ ಗೋಡೆ ಬರಹದ ವಿಷಯ ಮತ್ತು ವಿಸ್ತರಿಸುವ ವರ್ಣಚಿತ್ರದ ಸಣ್ಣ ವಿವರಣೆಯನ್ನು 1 ಪ್ಯಾರಾ ಅಥವಾ 100 ಪದಗಳಿಗೆ ಮೀರದಂತೆ ಇಮೇಲ್ ಮಾಡಬೇಕು. ಕಿರುಚಿತ್ರ ಸ್ಪರ್ಧೆಗೆ https// forms.gle / t3BbWTdXkbSv 4 WDu9 ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 8660863752, 6362363259, 7352308139 ಗೆ ಸಂಪರ್ಕಿಸಲು ಕೋರಿದೆ.
swachhaballaribcc@gmail.com ಇ-ಮೇಲ್ ಸಂಪರ್ಕಿಸಲು ಕೋರಿದೆ.