
ಚಿಟಗುಪ್ಪ:ನ.10: ಪುರಸಭೆ ಕಾರ್ಯಾಲಯದಲ್ಲಿ “ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನ”ದ ಜಾಥ ಕಾರ್ಯಕ್ರಮ ಪುರಸಭೆಯ ಕಛೇರಿಯಿಂದ ಮಹಾತ್ಮ ಗಾಂಧಿ ವೃತ್ತದ ವರೆಗೆ ಜಾಥ ಅಭಿಯಾನದ ಜೊತೆಗೆ ಸಹಿ ಕ್ಯಾಂಪೇನ್, ಏಕ ಬಳಕೆ ಪ್ಲಾಸ್ಟಿಕ್ ಮೂಲಕ ಪಟ್ಟಣ ನಾಗರೀಕರಲ್ಲಿ ಜಾಗೃತಿ ಮೂಡಿಸಲು ತಹಶೀಲ್ದಾರ ರವೀಂದ್ರ ದಾಮಾ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಹುಸಾಮುದ್ದಿನ್ ಬಾಬಾ, ವೃತ್ತ ನಿರೀಕ್ಷಕ ಮಹೇಶಗೌಡ ಪಾಟೀಲ್, ಆರಕ್ಷಕ-ಉಪ-ನಿರೀಕ್ಷಕ ಬಾಷುಮಿಯ ಕೊಂಚೂರ್ ಮತ್ತು ಪೆÇಲೀಸ್ ಸಿಬ್ಬಂದಿ ವರ್ಗದವರು, ತಹಶಿಲ್ ಕಛೇರಿಯ ಸಿಬ್ಬಂದಿಗಳಾದ ರಾಜೇಂದ್ರ ಹುಗ್ಗಿ, ಆನಂದಕುಮಾರ, ಪ್ರದೀಪ ಮತ್ತು ಅಗ್ನಿ ಶಾಮಕ ಇಲಾಖೆ ಸಿಬ್ಬಂದಿಗಳು ಹಾಗೂ ಪುರಸಭೆಯ ಸದಸ್ಯರಾದ ಜಲೀಸಾ ಬೇಗಂ ನೇತೃತ್ವದಲ್ಲಿ ಜಾಥ ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿಗಳ ಜೊತೆಗೂಡಿ ಜಾಥ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರವೇರಿಸಲಾಯಿತ್ತು. ತದ ನಂತರ ಪಟ್ಟಣದ ಅಂಗಡಿಯಲ್ಲಿ ಪಟಾಕಿ ಮಾರಾಟ ಕುರಿತು ಪರಿಶೀಲನೆ ಮಾಡಿದರು. ಜಾಥ ಕಾರ್ಯಕ್ರಮದಲ್ಲಿ ಪುರಸಭೆಯ ಅಧಿಕಾರಿಗಳಾದ ಪೂಜಾ ಪರಿಸರ ಅಭಿಯಂತರರು, ಕಂದಾಯ ಅಧಿಕಾರಿಗಳಾದ ವಿಜಯಕುಮಾರ, ಚಿದಾನಂದ ಪತ್ರಿ ಪ್ರ.ದ.ಸ., ಸಂತೋಷ ಬಿರಾದರ ಪ್ರ.ದ.ಸ., ವೈಶಾಲಿ ಕಿರಿಯ ಆರೋಗ್ಯ ನಿರೀಕ್ಷಕರು, ಸರೋಜನಿ, ಸಂತೋಷ ಕುಮಾರ, ನಥಾನಿಯೇಲ್, ಅಶ್ವಿನಿ, ಮಂಜುಳಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.