ಸ್ವಚ್ಛ ಗಂಗಾ ಯೋಜನೆಯಿಂದ ಉತ್ತಮ ಆರೋಗ್ಯ

ವಿಜಯಪುರ.ಮಾ೨೯:ನಿಮ್ಮ ಆರೋಗ್ಯ ನಿಮ್ಮ ಅಂಗೈಯಲ್ಲಿ ಎಂಬ ನಾಣ್ಣೂಡಿಯಂತೆ ಕಲ್ಯಾಣಿ ಗಳನ್ನು ಸ್ವಚ್ಛಗೊಳಿಸಿದರೆ ಪರಿಸರ ಚೆನ್ನಾಗಿರುತ್ತದೆ. ಕಲ್ಯಾಣಿಯಲ್ಲಿ ಕಸಗಳನ್ನು ಹಾಕಬಾರದು. ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರೆ ನಮ್ಮ ಆರೋಗ್ಯವು ತುಂಬಾ ಚೆನ್ನಾಗಿರುತ್ತದೆ ಎಂದು ಪುರಸಭಾ ಆರೋಗ್ಯ ಅಧಿಕಾರಿಗಳಾದ ಲಾವಣ್ಯ ರವರು ತಿಳಿಸಿದರು.
ಅವರು ಪಟ್ಟಣದಲ್ಲಿರುವ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಜೇ ಸಿ ಐ, ಶ್ರೀ ಓಂಕಾರೇಶ್ವರ ಭಕ್ತ ಮಂಡಳಿ, ಪುರಸಭಾ ಕಾರ್ಯಾಲಯ ವತಿಯಿಂದ ಗುರಪ್ಪನ ಮಠದ ಓಂಕಾರೇಶ್ವರಸ್ವಾಮಿ ದೇವಾಲಯದ ಮುಂಭಾಗದ ಕಲ್ಯಾಣಿಯನ್ನು ಸ್ವಚ್ಛತಾ ಯೋಜನೆಯಾಡಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡುತ್ತಿದ್ದರು.
ಜೇಸಿಐ ಸಂಸ್ಥೆಯ ಅಧ್ಯಕ್ಷರಾದ ಬೈರೇಗೌಡ ಮಾತನಾಡುತ್ತಾ, ಇದು ಕಾಡು ಪ್ರದೇಶವಾಗಿತ್ತು . ದೇವಾಲಯಕ್ಕೆ ಬಂದವರಿಗೆ ಮೂಲಭೂತ ಸೌಕರ್ಯ ಇರಲಿಲ್ಲ ಅದನ್ನರಿತ್ತ ಗುರಪ್ಪ ಸ್ವಾಮಿಗಳು ಕಲ್ಯಾಣಿ ನಿರ್ಮಿಸಿದ ಬಗ್ಗೆ ಪುರಾಣದಿಂದ ತಿಳಿಯುತ್ತದೆ. ವಿಜಯಪುರ ಪಟ್ಟಣ ದಲ್ಲಿಯೇ ನಿರ್ಮಿಸಿದ ಮೊದಲ ಕಲ್ಯಾಣಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷರಾದ ಕೆ ವೆಂಕಟೇಶ್ ಮಾತನಾಡುತ್ತಾ, ಊರಿಗೊಂದು ಕೆರೆ ಇದ್ದರೆ ಪ್ರಾಣಿ ಪಕ್ಷಿಗಳಿಗೂ ಸುಂದರವಾದ ಪರಿಸರಕ್ಕೂ ಅನುಕೂಲವಾಗುತ್ತದೆ . ಕೆರೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯವು ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಈ ಸರಳ ಕಾರ್ಯಕ್ರಮದಲ್ಲಿ ಪುರಸಭಾ ಆರೋಗ್ಯಾಧಿಕಾರಿ ಗಳಾದ ಲಾವಣ್ಯ ಪುರಸಭಾ ಸದಸ್ಯರಾದ ನಂದಕುಮಾರ್ ಮುನಿರಾಜು ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷರಾದ ಎಂ ಶಿವಕುಮಾರ್ ರಾಷ್ಟ್ರೀಯ ಸಂಯೋಜಕರಾದ ಜಯರಾಮ್ ನಿಕಟ ಪೂರ್ವ ಅಧ್ಯಕ್ಷರಾದ ವಿ ವೆಂಕಟೇಶ್ ಜೇಸಿ ಐ ವಲಯ ೧೪ರ ಕಾರ್ಯಕ್ರಮಗಳ ಅನುಷ್ಠಾನ ನಿರ್ದೇಶಕರಾದ ಎನ್ ಸಿ ಮುನಿ ವೆಂಕಟರಮಣ ಗೌರವ ಕಾರ್ಯದರ್ಶಿಗಳಾದ ಚಿದಾನಂದಮೂರ್ತಿ ಸಂಘಟನಾ ಕಾರ್ಯದರ್ಶಿಗಳಾದ ವಿ ಆನಂದ್ ಶ್ರೀ ಓಂಕಾರೇಶ್ವರ ಭಕ್ತ ಮಂಡಳಿ ಅಧ್ಯಕ್ಷರಾದ ಬಚ್ಚೇಗೌಡ ಪುರಸಭಾ ಸದಸ್ಯರಾದ ನಂದಕುಮಾರ್ ಸಮಾಜ ಸೇವಕರಾದ ಮುನಿರಾಜು ಉಪಸ್ಥಿತರಿದ್ದರು.