ಸ್ವಚ್ಛಭಾರತ ಮಿಷನ್ ಅಭಿಯಾನ

ಕಲಬುರಗಿ ಜೂ 23: ತಾಲೂಕಿನ ಭೂಪಾಲ್ ತೆಗನೂರ ಗ್ರಾಮ ಪಂಚಾಯತಿ ಮತ್ತು ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸ್ವಚ್ಛಭಾರತ ಮಿಷನ್ ಯೋಜನೆಯಡಿಯ ಐಇಸಿ ಚಟುವಟಿಕೆಗಳ ಕುರಿತು ಉಪನ್ಯಾಸ ಮತ್ತು ಸ್ಟಿಕರ್ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿದ್ಯಾವತಿ ಜಿ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು.ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ, ಗ್ರಾಪಂ ಅಧ್ಯಕ್ಷರಾದ ಲಲಿತಾಬಾಯಿ ಎನ್ ಶೆಳ್ಳಗಿ, ಗ್ರಾಪಂ ಸದಸ್ಯರು, ಕಾರ್ಯದರ್ಶಿ ,ಸಿಬ್ಬಂದಿ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರಿದ್ದರು.