
ಇಂಡಿ :ಆ.8: ಹತ್ತು ದಿನಗಳ ವರೆಗೆ ನಡೆಯುವ ಸ್ವಚ್ಛತೆ ಅಭಿಯಾನದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಪಾಲಗೊಂಡು ನಗರ ಸುಂದರಗೊಳಿಸಬೇಕು ಎಂಬ ಉದ್ದೇಶದಿಂದ ಕಂದಾಯ ಉಪ ವಿಭಾಗಾಧಿಕಾರಿ ಹಮಿದ ಗದ್ಯಾಳ ಅವರು ತಮ್ಮ ಇಲಾಖೆ ಸಿಬ್ಬಂದಿಗಳ ಜೊತೆಗೆ ಕಸ ಗೂಡಿಸಿ ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸಿದರು. ನಗರದ ಸೇವಾಲಾಲ್ ಸರ್ಕಲ್ ದಿಂದ ಶಂಕರ ಪಾರ್ವತಿ ಭವನದ ವರೆಗೆ ಕಂದಾಯ ಉಪ ವಿಭಾಗಧಿಕಾರಿಗಳು ತಮ್ಮ ಇಲಾಖೆಯ ತಂಡ ಒಂದು ಬದಿಗಾದರೆ ಇನ್ನೊಂದು ಬದಿಗೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಸೇರಿದಂತೆ ಅವರ ತಂಡ ಸ್ವಚ್ಛತೆ ಗೊಳಿಸಿದರು. ಈ ಕಸವನ್ನು ಪುರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿಗಳಿಂದ ಕಸ ವಿಲೇವಾರಿ ಮಾಡಿದರು.