ಸ್ವಚ್ಛತೆ ಕಾಪಾಡಲು ಸಂಸದ ಎಸ್.ಮುನಿಸ್ವಾಮಿ ಕರೆ

ಕೋಲಾರ ಅ.೨- ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ನಾವೇ ಸ್ವಚ್ಛಗೊಳಿಸಿಕೊಂಡು ಗಿಡಮರ ನೆಡುವ ಮುಖಾಂತರ ನಮ್ಮ ನಗರದ ಸೌಂದರ್ಯವನ್ನು ನಾವೇ ಕಾಪಾಡಿಕೊಳ್ಳಬೇಕು ಎಂದು ಕೋಲಾರ ಸಂಸದ ಸಂಸದರಾದ ಎಸ್. ಮುನಿಸ್ವಾಮಿಯವರು ಕರೆ ನೀಡಿದರು
ಭಾರತ ಸರ್ಕಾರದ ಸ್ವಚ್ಛತಾ ಆಂದೋಲನ ಕರೆಯ ಮೇರೆಗೆ ಕೋಲಾರದ ಅಂತರಗಂಗೆ ರಸ್ತೆಯ ಸಪ್ತಗಿರಿ ಬಡಾವಣೆಯಲ್ಲಿ ಸಪ್ತಗಿರಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದ ಸಪ್ತಗಿರಿ ಬಡಾವಣೆ ಕ್ಷಮಾಭಿವೃದ್ಧಿ ಸಂಘದ ವತಿಯಿಂದ ತಮ್ಮ ಬಡಾವಣೆಯನ್ನು ಎಲ್ಲರೂ ಒಟ್ಟುಗೂಡಿ ಪ್ರಧಾನಿಯವರ ಸ್ವಚ್ಛ ಭಾರತ್ ಕರಿಯ ಮೇರೆಗೆ ಸ್ವಚ್ಛಗೊಳಸ ಹೊರಟಿರುವುದು ತುಂಬಾ ಶ್ಲಾಘನೀಯ ವಿಚಾರವೆಂದು ಸಂಘದ ಸದಸ್ಯರನ್ನುಅಭಿನಂದಿಸಿದರು.
ಸಂಘದ ಅಧ್ಯಕ್ಷ ಎಸ್.ಮುನಿಯಪ್ಪ ಬಡಾವಣೆಯ ಸ್ವಚ್ಛತಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ ಪ್ರಧಾನ ಮಂತ್ರಿಗಳ ಕರೆಯ ಮೇರೆಗೆ ಸ್ವಚ್ಛ ಭಾರತ್ ಕಾರ್ಯಕ್ರಮದ ಅಡಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಈ ಸ್ವಚ್ಛತಾ ಕಾರ್ಯವನ್ನು ನಮ್ಮ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಬಡಾವಣೆಯಲ್ಲಿ ಸ್ವಚ್ಛತಾ ಮತ್ತು ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ ಎಂದರು.
ಬಡಾವಣೆಯ ಗಿಡಗಂಟಿ, ಚಿಂದಿ, ಪೇಪರ್, ಪ್ಲಾಸ್ಟಿಕ್, ಖಾಲಿ ಬಾಟಲ್ ಮುಂತಾದ ಕಸ, ಕಡ್ಡಿಯನ್ನು ಸ್ವಚ್ಛಗೊಳಿಸಲಾಯಿತು. ನಗರಸಭೆ ಹಲವು ಸಿಬ್ಬಂದಿ ಶ್ರಮದಾನ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಬಡಾವಣೆಯ ಎಲ್ಲರೂ ಸಂಘದ ಸಮವಸ್ತ್ರದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಪಿ.ಡಿ.ಓ ಅಂಬಿಕಾ, ನೋಡಲ್ ಅಧಿಕಾರಿ ಶ್ರೀಕಾಂತ್ ನಗರಸಭೆಯ ಆರೋಗ್ಯ ನಿರೀಕ್ಷಕ ನವಾಜ್, ಬಡಾವಣೆಯ ನಿವೃತ್ತ ಬ್ಯಾಂಕ್ ಅಧಿಕಾರಿ ಮಂಜುನಾಥ, ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ಭೂಮಾಪನ ಇಲಾಖೆಯ ಶಿವಣ್ಣ, ಸತ್ಯನಾರಾಯಣ ಎಂಟರ್ಪ್ರೈಸಸ್‌ನ ವಿಜಯಕುಮಾರ್, ಶಿಕ್ಷಣ ಚಿಂತಕರ ಎಚ್.ಆರ್.ಡಿ.ಸಿ. ಕೌಶಲ್ಯ ತರಬೇತಿ ಕೇಂದ್ರದ ಎಂ.ವಿ.ನಾರಾಯಣಸ್ವಾಮಿ, ಕೆ.ಎಸ್.ಆರ್.ಟಿ.ಸಿ.ಯ ಬಿಟಿಆರ್ ರೆಡ್ದಿ, ಪೋಲಿಸ್ ಇಲಾಖೆಯ ತಿಪ್ಪಣ್ಣ, ಹರೀಶ್, ವಿಶ್ವನಾಥ್, ಬಡಾವಣೆಯ ಹಿರಿಯರಾದ ಕೀರ್ತಿನಾರಾಯಣ, ಬೋರ್ವೆಲ್ ಸ್ವಾಮಿ, ಆರ್.ಎಲ್.ಮಂಜುನಾಥ್ ಪಾಲ್ಗೊಂಡಿದ್ದರು.