ಸ್ವಚ್ಛತೆ,ಶ್ರಮದಾನ ಗಾಂಧೀಜಿ ಕಲ್ಪನೆ ಸಾಕಾರ ಅವಶ್ಯ: ನಭಿಸಾಬ ಕಂದಗಲ್ಲ..

ಮುದಗಲ್ಲ ಪುರಸಭೆ ಕಾರ್ಯಾಲಯ ದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆಯುವ “ಸ್ವಚ್ಛತಾ ಹೀ” ಸೇವಾ ಕಾರ್ಯಕ್ರಮ ಹಾಗೂ ಜಾಥಾವು ಪುರಸಭೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ನೇತೃತ್ವ ದಲ್ಲಿ ಪುರಸಭೆ ಅಧಿಕಾರಿಗಳು ಮತ್ತ ಸಿಬ್ಬಂದಿಯಿಂದ ರವಿವಾರ ಮುದಗಲ್ಲ ನ ಚೌಡಿಕಟ್ಟಿ ಬಸ್ ನಿಲ್ದಾಣ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮುದಗಲ್ಲ ನಲ್ಲಿ ಸ್ವಚ್ಛತೆ ಯ ಶ್ರಮದಾನ ನಡೆಯಿತು.

ಪುರಸಭೆಯ ಎಲ್ಲ ಸಿಬ್ಬಂದಿ ಹಾಗೂ ಪುರಸಭೆ ಯ ಹಾಗೂ ಮುದಗಲ್ಲ ಪ್ರಮುಖ ರಸ್ತೆಯಲ್ಲಿ ಬಂದು ಶ್ರಮದಾನ ಮಾಡಿದರು.

ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲರ ಕರ್ತವ್ಯ ಸ್ವಚ್ಛತೆ ಮತ್ತು ಶ್ರಮದಾನದ ಕುರಿತು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಕಲ್ಪನೆಯನ್ನು ಅನುಷ್ಠಾನ ಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು