ಸ್ವಚ್ಛತೆಯ ಬಗ್ಗೆ ಘೋಷ ವಾಕ್ಯ ಬರೆಯುವ ಸ್ಪರ್ಧೆ

ಕಲಬುರಗಿ:ಜು.20:ಕೌಶಲ್ಯ ಅಭಿವೃಧ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಾಯೋಜಿತ ಸಂಸ್ಥೆಯಾದ ಜನ ಶಿಕ್ಷಣ ಸಂಸ್ಥಾನ ಗುಲಬರ್ಗಾ ಜಿಲ್ಲೆಯಾದ್ಯಂತ ವಿವಿಧ ಕೌಶಲ್ಯ ಅಭಿವೃಧ್ಧಿ ತರಬೇತಿಗಳನ್ನು ನಡೆಸುತ್ತಾ ಬಂದಿದೆ. ಕೌಶಲ್ಯ ಅಭಿವೃಧ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಆದೇಶದಂತೆ ಜನ ಶಿಕ್ಷಣ ಸಂಸ್ಥಾನವು ಸತತವಾಗಿ 15 ದಿನ ಅಂದರೆ 16/07/2022 ರಿಂದ 31/07/2022 ರವರೆಗೆ ನಡೆಯುವ ಸ್ವಚ್ಛತಾ ಪಕವಾಡ ಕಾರ್ಯಕ್ರಮದ ಅಡಿಯಲ್ಲಿ ದಿನಾಂಕ 19/07/2022 ರಂದು ಸ್ವಚ್ಛತೆಯ ಬಗ್ಗೆ ಘೋಷ ವಾಕ್ಯಗಳನ್ನು ಬರೆಯುವ ಸ್ಪರ್ಧೆಯನ್ನು ನಗರದ ವಿದ್ಯಾನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕರಾದ ಶ್ರೀ ಸುರೇಂದ್ರ ಪೋಲಿಸ್ ಪಾಟೀಲ್ ರವರು ವೈಯಕ್ತಿಕ ಶುಚಿತ್ವ, ಮನೆ ಶುಚಿತ್ವ, ಸುತ್ತಲಿನ ಪರಿಸರ ಶುಚಿತ್ವ ನಮ್ಮ ಓಣೆಯ ಶುಚಿತ್ವವನ್ನು ನಾವು ಇಟ್ಟುಕೊಳ್ಳುವುದಕ್ಕಾಗಿ ಜನರಲ್ಲಿ ಅರಿವು ಮೂಡಿಸಲು ಸ್ವಚ್ಛತೆಯ ಬಗ್ಗೆ ಘೋಷ ವಾಕ್ಯಗಳನ್ನು ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ 3 ಜನರಿಗೆ ಬಹುಮಾನಗಳನ್ನು ಸ್ವಚ್ಛ್ತಾ ಪಾಕ್ಷಿಕ ಅಭಿಯಾನದ ಕೊನೆಯ ದಿನದ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾರ್ವತಿ ಹಿರೇಮಠ, ಜ್ಯೋತಿ, ಲಲಿತಾ ರಾಜಕುಮಾರ, ವಿಜಯಲಕ್ಷ್ಮೀ ಹಾಗೂ ಬಸವರಾಜ ಧಾಬಾ ಉಪಸ್ಥಿತರಿದ್ದರು.