ಸಂಜೆವಾಣಿ ವಾರ್ತೆ
ಕೊಟ್ಟೂರು, ಮಾ.25: ಪಟ್ಟಣದ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಮುಖ್ಯ ಅಧಿಕಾರಿಯಾಗಿ ನಸರುಲ್ಲಾ ನೇತೃತ್ವದಲ್ಲಿ ಶ್ರೀ ಸಾಯಿರಾಮ್ ಸ್ವ ಸಹಾಯ ಸಂಘದ ಮಹಿಳೆಯರಿಗೆ ಸ್ವಚ್ಛತೆಯ ಬಗ್ಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ನಾನು ಕಸವನ್ನು ಎಲ್ಲೆಂದರಲ್ಲಿ ಚೆಲ್ಲುವುದಿಲ್ಲ ಇತರರನ್ನು ಚೆಲ್ಲಲು ಬಿಡುವುದಿಲ್ಲ, ನಾನೇ ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನನ್ನ ಪ್ರದೇಶದಲ್ಲಿ ನನ್ನ ಊರಿನಲ್ಲಿ ನನ್ನ ಕಚೇರಿಯಲ್ಲಿ ಸ್ವಚ್ಛತಾ ವಿಶೇಷ ಕಾರ್ಯಚರಣೆಯನ್ನು ಪ್ರಾರಂಭಿಸಿ ನೇತೃತ್ವ ವಹಿಸುತ್ತೇನೆ, ಸ್ವಚ್ಛತೆ ಕಡೆಗೆ ಬದ್ಧತೆಯನ್ನು ಇಟ್ಟುಕೊಂಡು ಈ ಪ್ರತಿಜ್ಞೆಯನ್ನು ಮಾಡುತ್ತಿದ್ದೇನೆ ಹಾಗೂ ಸ್ವಚ್ಛತೆಗಾಗಿ ಸಮಯವನ್ನು ಮೀಸಲಿಡುತ್ತೇನೆ. ಈ ದೃಢನಂಬಿಕೆಯೊಂದಿಗೆ ಸ್ವಚ್ಛ ಭಾರತ ಮಿಷನ್ ಸಂದೇಶವನ್ನು ಹಳ್ಳಿಗಳಲ್ಲಿ ಹಾಗೂ ನಗರಗಳಲ್ಲಿ ಜಾಗೃತಗೊಳಿಸುತ್ತೇನೆ, ನಾನು ಇಂದು ತೆಗೆದುಕೊಳ್ಳುತ್ತಿರುವ ಪ್ರತಿಜ್ಞೆಯನ್ನು ಇನ್ನು ನೂರು ಜನರಿಗೆ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತೇನೆ. ಸ್ವಚ್ಛತೆಯ ಕೆಲಸಕ್ಕೆ 100 ಗಂಟೆಗಳ ಕಾಲ ವಿನಿಯೋಗಿಸುವಂತೆ ಪ್ರಯತ್ನಿಸುತ್ತೇನೆ, ನಾನು ಸ್ವಚ್ಛತೆಯೆಡೆಗೆ ತೆಗೆದುಕೊಂಡಿರುವ ಪ್ರತಿ ಹೆಜ್ಜೆಯಿಂದಾಗಿ ನನ್ನ ದೇಶವು ಸ್ವಚ್ಛವಾಗಲು ಸಹಾಯವಾಗುವುದೆಂದು ನಾನು ದೃಢವಾಗಿ ನಂಬಿದ್ದೇನೆ ಎಂದು ಮುತ್ತುರಾಜ್ ಬೋಧಿಸಿದರು.
ಈ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಎ ಕೆ ಪೂರ್ಣಿಮಾ ಹೆಚ್, ಚಂಪಾಕ್ಷಿ ಬಿ ಎಸ್ , ಕೆ ಹೆಚ್ ಎಂ ವೀಣಾ, ಕಿರಿಯ ಆರೋಗ್ಯ ನಿರೀಕ್ಷಕರಾದ ಅನುಷ್ಯ, ಹಾಗೂ ಸಿಬ್ಬಂದಿ ಇದ್ದರು