ಸ್ವಚ್ಛತೆಯಿಂದ ಆರೋಗ್ಯದ ಜೀವನ -ಮಲ್ಲಿಕಾರ್ಜುನ

ಸಿಂಧನೂರು.ನ.1-ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯದಿಂದ ನೆಮ್ಮದಿ ಜೀವನ ನಡೆಸಬೇಕು ಎಂದು ನೂತನ ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಜಮಾಅತೆ ಇಸ್ಲಾಮೀ ಹಿಂದ್ ಇಂದು ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ನಿಲ್ದಾಣ ಸ್ವಚ್ಛತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಮನೆ ಸ್ವಚ್ಛವಾಗಿಟ್ಟುಕೊಂಡು ಅಕ್ಕ-ಪಕ್ಕದ ಮನೆಯವರಿಗೆ ಸಹ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಿ ಹೇಳಬೇಕು.
ನಮ್ಮ ವಾರ್ಡ್ ಸ್ವಚ್ಛತೆ ಮಾಡುವ ಜೊತೆಗೆ ನೆರೆ-ಹೊರೆಯರಿಗು ಸಹ ಸ್ವಚ್ಛತೆ ಕಾಪಾಡಿಕೊಂಡು ರೋಗ-ರುಜಿನ ಬಾರದಂತೆ ಎಲ್ಲರು ಆರೋಗ್ಯ ಹಾಗೂ ನೆಮ್ಮದಿಯ ಸುಖ ಜೀವನ ನಡೆಸಬೇಕು ಎಂದು ನಗರ ಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ನಗರದ ನಾಗರೀಕರಲ್ಲಿ ಮನವಿ ಮಾಡಿಕೊಂಡರು.
ಅಭಿಯಾನದ ಸಂಚಾಲಕರಾದ ಟಿ.ಹುಸೇನ್ ಸಾಬ್ ಮಾತನಾಡಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಅ.23 ರಿಂದ ನ.5 ರ ತನಕ ಮುಹಮ್ಮದ್ ಮಾನವತಾ ಮಾರ್ಗದರ್ಶನ ಕಾರ್ಯಕ್ರಮದ ಮೂಲಕ ಅವರ ಜೀವನ ಸಂದೇಶಗಳನ್ನು ಸಾರ್ವಜನಿಕರಿಗೆ ತಿಳಿಸುವ ಜೊತೆಗೆ ರಕ್ತ ದಾನ ಶಿಬಿರ, ಸ್ವಚ್ಛತೆ ಕಾರ್ಯಕ್ರಮ ಸೇರಿದಂತೆ ಸಮಾಜಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಸ್ವಚ್ಛತೆ ಕಾರ್ಯಕ್ರಮಕ್ಕೆ ನಗರಸಭೆ ವತಿಯಿಂದ ಜೆ.ಸಿ.ಬಿ ,ನೀರಿನ ಟ್ರ್ಯಾಕ್ಟರ್ ಜೊತೆಗೆ ಬ್ಲೀಚಿಂಗ್ ಪೌಡರ್ ನೀಡಿ ಸಹಕರಿಸಿದಕ್ಕೆ ನಗರಸಭೆ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
8ನೇ ವಾರ್ಡ್‌ನ ಸದಸ್ಯರಾದ ಆಲಂ ಬಾಷಾ ,ಖಾದರ್ ಸುಬಾನಿ ,ಬಾಬರ್ ಬೇಗ್ ,ಚಾಂದಾ ಪಾಷಾ ಜಾಗೀದಾರ್ ,ಸೈಯದ್ ಅಪಿಸ್ ,ಸೈಯದ್ ಮುಲ್ಲಾಸಾಬ್ ,ಮೌಲಾ ಸಾಬ್ ಸಾಲಗುಂದ ಅನ್ವರಬೇಗ್ ,ಅಬ್ದುಲ್ ಗನಿ ,ಜಾಕಿರ್ ಹುಸೇನ್, ಆಸೀಮ್ ಸೇರಿದಂತೆ ಇತರರು ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.