ಸ್ವಚ್ಛತೆಗೆ ಹೆಸರುವಾಸಿ ಮಳಖೇಡ ಸಮುದಾಯ ಆಸ್ಪತ್ರೆ

ಸೇಡಂ,ಜು, 01 :ಮಳಖೇಡ ಜಿಲ್ಲಾ ಪಂಚಾಯಿತಿ ಜೊತೆಗೆ ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆ ಇದೆ. ಇಲ್ಲಿರುವಂತಹ ಸಮುದಾಯ ಆಸ್ಪತ್ರೆಯು 2018 ರಿಂದ 2020 ರವರೆಗೆ ಎರಡು ಬಾರಿ ಕಾಯಕಲ್ಪ ಪ್ರಶಸ್ತಿ ಸಮಾಧಾನಕರ ಪ್ರಶಸ್ತಿ ಪಡೆದುಕೊಂಡ ಸಮುದಾಯವಾಗಿದೆ. ಇಲ್ಲಿರುವಂತಹ ಆಸ್ಪತ್ರೆಯ ಒಳಗಡೆ ಸ್ವಚ್ಛ ಸುಂದರವಾಗಿ ಇಲ್ಲಿನ ಡಾಕ್ಟರ್ಸ್ ಹಾಗೂ ಸಿಬ್ಬಂದಿ ವರ್ಗದವರು ಇಟ್ಟುಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ.
ಓ ಪಿ ಡಿ, ವೈದರು ಕುಳಿತುಕೊಂಡು ರೋಗಿಗಳನ್ನು ತಪಾಸಣೆ ಮಾಡುವ ಕೋಣೆ ಬರುವಂತ ರೋಗಿಯಲ್ಲಿ ಗುಣಮುಖರಾಗುವಂತೆ ಮಾಡುತ್ತದೆ.
ಇಲ್ಲಿನ ಸಮುದಾಯ ಆಸ್ಪತ್ರೆಯ ಆಡಳಿತ ವೈದ್ಯರು ಹಾಗೂ ತಾಲೂಕ ಹೆಚ್ಚುವರಿ ಅಧಿಕಾರಿಗಳಾದ ಡಾ. ರಾಕೇಶ್ ಕಾಂಬಳೆ ಎಂದರೆ ಇಲ್ಲಿನ ಸುತ್ತಮುತ್ತಲಿನ ಜನರಿಗೆ ಅಚ್ಚುಮೆಚ್ಚು, ಹೆಚ್ಚಿನ ರೋಗಿಗಳು ಇವರ ಬಳಿ ಬಂದು ತಪಾಸಣೆ ಮಾಡಿಕೊಂಡು ಹೋದವರು ಮರಳಿ ಯಾವ ರೋಗವಿಲ್ಲದೆ ಬಹು ದಿನಗಳಿಂದ ಗುಣಮುಖರಾಗಿ ತಮ್ಮ ಕಾರ್ಯಗಳಲ್ಲಿ ತೊಡಗುತ್ತಾರೆ ಮರಳಿ ಮತ್ತೆ ರೋಗಿಗಳು ಅನಾರೋಗ್ಯದಿಂದ ಬರುವುದೇ ಇಲ್ಲ ಎಂಬುದು ಇಲ್ಲಿನ ಜನರ ಅಭಿಪ್ರಾಯವಾಗಿದೆ.

ಇಲ್ಲಿನ ಸಿಬ್ಬಂದಿ ವರ್ಗದವರು ಶಿಸ್ತಿನ ಸಿಪಾಯಿಯಂತೆ ಕಾರ್ಯನಿರ್ವಹಿಸುತ್ತೀದಾರೆ, ಹಗಲು ರಾತ್ರಿಯಲ್ಲಿ ಬರುವಂತಹ ರೋಗಿಗಳಿಗೆ ಸರಿಯಾಗಿ ತಪಾಸಣೆ ಮಾಡುವ ಮುಖಾಂತರ ಇಲ್ಲಿನ ಪ್ರೀತಿ ವಿಶ್ವಾಸ ಗಳಿಸಿದ್ದಾರೆ.

ಕಂಪೌಂಡಿಲ್ಲದೆ ಆ ಸ್ವಚ್ಛತೆಯಿಂದ ಬಳಲುತ್ತಿರುವ ಆಸ್ಪತ್ರೆ;
ಸುಮಾರು ವರ್ಷಗಳಿಂದ ಸಮುದಾಯ ಆಸ್ಪತ್ರೆಯ ಎಡ ಹಿಂದುಗಡೆ ಕಾಂಪೌಂಡ್ ಇಲ್ಲದೆ ಸುತ್ತಮುತ್ತಲಿನ ಹಂದಿಗಳು ತಿರುಗಾಡುವುದರಿಂದ ಎದ್ದು ಕಾಣುತ್ತಿದೆ ಇಲ್ಲಿನ ಡಾಕ್ಟರ್ಸ್ ಹಾಗೂ ಸಾರ್ವಜನಿಕರು ರೋಗಿಗಳು ಆಸ್ಪತ್ರೆಯ ಸುತ್ತಮುತ್ತ ಬಹುಬೇಗ ಕಾಂಪೌಂಡ್ ನಿರ್ಮಿಸಬೇಕೆಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲರಿಗೆ ಒತ್ತಾಯಿಸುತ್ತಿದ್ದಾರೆ.