ಸ್ವಚ್ಛತೆಗೆ ಆಗ್ರಹಿಸಿ ಮನವಿ


ನವಲಗುಂದ,ಡಿ.3: ಸ್ಥಳೀಯ ಬಸವೇಶ್ವರ ನಗರದ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಸಿಬ್ಬಂದಿಗಳಿಗೂ ಹಾಗೂ ಜನ-ಪ್ರತಿನಿಧಿಗಳಿಗೂ ಮೇಲಿಂದ ಮೇಲೆ ತಿಳಿಸಿದರೂ ಕೂಡಾ ಯಾವುದೇ ರೀತಿ ಸ್ವಚ್ಛತೆಯ ಕಾಮಗಾರಿ ನಡೆಯುತ್ತಿಲ್ಲ. ಹಳ್ಳಿಕೇರಿ ರಸ್ತೆಯ ಪ್ರಮುಖ ಗಟಾರು ನಿರ್ಮಾಣವಾಗಿ ಸುಮಾರು ಆರು ತಿಂಗಳು ಕಳೆದರೂ ಕೂಡ ಪುರಸಭೆ ಸಿಬ್ಬಂದಿಗಳು ಒಮ್ಮೆಯೂ ಸ್ವಚ್ಛತೆಗೆ ಮುಂದಾಗಿಲ್ಲ ಕೇವಲ ಹಾರಿಕೆ ಉತ್ತರಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೂಶ ವ್ಯಕ್ತಪಡಿಸಿ ಪುರಸಭೆಯ ಮ್ಯಾನೇಜರ್ ಸುರೇಖಾ ಬಿ ಪಾಟೀಲ್ ಅವರಿಗೆ ಬಸವೇಶ್ವರ ನಗರ ನಿವಾಸಿಗಳು ಮನವಿ ಸಲ್ಲಿಸಿದರು.
ವಿಜಯಮಾಂತೇಶ ತಿರಕೋಡಿ ಹಾಗೂ ಶೇಖಪ್ಪ ಬೆಳವಟಗಿ ಮಾತನಾಡಿ ಜನ-ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಹಳ್ಳಿಕೇರಿ ರಸ್ತೆಗೆ ಹೊಂದಿರುವ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು ಪ್ರತಿ ನಾಲ್ಕು ಮನೆಗೆ ಪುರಸಭೆಯಿಂದ ಒಂದು ಸಲಕೆಯನ್ನು ನೀಡಿ ನಮ್ಮ ಮನೆಯ ಮುಂದಿರುವ ಗಟಾರು ಸ್ವಚ್ಛತೆಯನ್ನು ನಾವೇ ಸ್ವತಃ ಮಾಡಿಕೊಳ್ಳುತ್ತೇವೆ. ಇಲ್ಲದೆ ಹೋದರೆ ಪ್ರತಿ 15 ದಿನಕ್ಕೊಮ್ಮೆ ಅಥವಾ ಒಂದು ತಿಂಗಳಿಗೊಮ್ಮೆ ಗಟಾರ ಸ್ವಚ್ಛತೆ ಮತ್ತು ರಸ್ತೆಯ ಪಕ್ಕದಲ್ಲಿರುವ ಕಸವನ್ನು ತೆಗಿಸಬೇಕು ಪುರಸಭೆಯಿಂದ ಕಸದ ವಾಹನವೂ ಬಂದರೂ ಕೂಡ ಕೆಲವರು ರಸ್ತೆ ಪಕ್ಕಕ್ಕೆ ಕಸವನ್ನು ಎಸೆಯುತ್ತಿದ್ದಾರೆ. ಅದರ ಬಗ್ಗೆ ಜಾಗೃತಿ ಮತ್ತು ಬಸವೇಶ್ವರ ನಗರದಲ್ಲಿ ಅಲ್ಲಲ್ಲಿ ಪುರಸಭೆಯಿಂದ ಕಸದ ತೊಟ್ಟಿಯನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಆಸಿಫ್ ಚಾಹುಸೇನ ಅಜೀಜ್ ಭಾರದ್ವಾಲೆ ಲಕ್ಷ್ಮಣ್ ಬೆಳವಟಗಿ ಆನಂದ್ ತಿರಕೋಡಿ ಮುತ್ತು ಬುಳ್ಳನ್ನವರ ಹುಲಿಗೆಮ್ಮ ವಡ್ಡರ್ ವಾಯ್ ಎ ಬೋರೋಜಿ ಮಂಜುನಾಥ ಬೋರೋಜಿ ಹುಸೇನಸಾಬ ಕೆರೂರ ಬಾರಾಇಮಾಮ್ ನದಾಫ ಎಸ್ ಬಿ ದೊಡ್ಡಮನಿ ಬಸಪ್ಪ ಭೋವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು