ಸ್ವಚ್ಛತಾ ಕಾರ್ಯಕ್ರಮ

ಬೀದರ:ನ.10: ತಾಲ್ಲೂಕಿನ ಹಮೀಲಾಪೂರ ಗ್ರಾಮದ ಬುದ್ಧ ಯುತ್ ಕ್ಲಬ್ ಹಮಿಲಾಪೂರದಿಂದ ಮಿರಾಗಂಜ ಗ್ರಾಮದ ಮಧ್ದ ಇರುವ ರಿಂಗ್ ರೋಡ್ ಡಿವೈಡರ್‍ನಲ್ಲಿ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಳ್ಳಲಾಯಿತು.

ಮಹೇಶ ಎಸ್. ರಾಂಪೂರೆ ಅವರ ಮುಂದಾಳ್ವತದಲ್ಲಿ ಜರುಗಿದ ಈ ಅಭಿಯಾನದಲ್ಲಿ ಅಲ್ಲಿ ಪ್ರದೇಶ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತ್ತು. ಈ ಸಂದರ್ಭದಲ್ಲಿ ಬುದ್ಧ ಯುತ್ ಕ್ಲಬ್ ಸದಸ್ಯರುಗಳಾದ ದಿನೇಶ ಸೋನಿ, ಪಂಚಶೀಲ ಸೋನಿ, ಡೇವಿಡ್, ವಿಕ್ಕಿ, ಅಶೋಕ ಶರ್ಮಾ, ನರಸಿಂಹ ಸ್ವಾಮಿ, ಪ್ರದೀಪ, ಸಂತೋಷ, ವಿಶಾಲ ಹುಲಿ, ಆಕಾಶ ಹಾಗೂ ಫಾರೆಸ್ಟರ್ ಸಿಬ್ಬಂದಿಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.