ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಚಾಲನೆ

ಸಂಜೆವಾಣಿ ವಾರ್ತೆ

ಹಿರಿಯೂರು.ಜು.೧೫: ನಗರ ವ್ಯಾಪ್ತಿಯಲ್ಲಿರುವ ವಾರ್ಡ್ ನಂ.24 ರ ಕುವೆಂಪುನಗರದಲ್ಲಿ “ನಮ್ಮ ಚಿತ್ತ ಸ್ವಚ್ಛತೆಯತ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು  ವಾರ್ಡ್‌ನಲ್ಲಿರುವ ರಾಜಕುಮಾರ್ ಪಾರ್ಕ್, ಅಂಗನವಾಡಿ ಪಕ್ಕದ ಪಾರ್ಕ್, ಅದೇ ರೀತಿ 4 ರಿಂದ 5 ಪಾರ್ಕ್ ಗಳನ್ನು ಸ್ವಚ್ಛಗೊಳಿಸಿದ್ದಲ್ಲದೆ ವಾರ್ಡ್‌ಗಳಲ್ಲಿನ ಪ್ರತಿ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಂಡಿದ್ದರು. ಜೊತೆಗೆ ವಾರ್ಡ್‌ಗಳಲ್ಲಿನ ಮನೆ ಮನೆಗಳಿಗೆ ಭೇಟಿ ನೀಡಿ ಹಸಿಕಸ ಮತ್ತು ಒಣಕಸ ಮತ್ತು ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸಲಾಯಿತು.  ಕಾರ್ಯಕ್ರಮದಲ್ಲಿ  ನಗರಸಭೆಯ ಪೌರಾಯುಕ್ತರಾದ ಹೆಚ್. ಮಹಂತೇಶ್, ವಾರ್ಡಿನ ಸದಸ್ಯರಾದ  ಈರಲಿಂಗೇಗೌಡ ಹಾಗೂ ಕುವೆಂಪು ನಗರದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ  ಹೆಚ್.ಬಿ. ಚಂದ್ರಶೇಖರ್‌ ಮತ್ತು ಪದಾಧಿಕಾರಿಗಳು ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು, ನಗರಸಭೆಯ ಸಿಬ್ಬಂದಿಗಳು,ಹಿರಿಯ ಆರೋಗ್ಯ ನಿರೀಕ್ಷಕರಾದ ಸುನೀಲ್ ಕುಮಾರ್, ಸಂಧ್ಯಾ ವೈ ಎಸ್, ಮೀನಾಕ್ಷಿ ಜಿ ರವರು ಮತ್ತು ಕಿರಿಯ ಆರೋಗ್ಯ ನಿರೀಕ್ಷಕರಾದ ಅಶೋಕ್ ಕುಮಾರ್ ಮತ್ತು ಮಹಾಲಿಂಗರಾಜ್ ರವರು ಭಾಗವಹಿಸಿದ್ದರು .ಜೊತೆಗೆ ಸ್ವಚ್ಛತೆಯ ಕೇಂದ್ರ ಬಿಂದುಗಳಾದ ಪೌರ ಕಾರ್ಮಿಕರಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.