ಸ್ವಚ್ಚ ಭಾರತ ಅಭಿಯಾನಕ್ಕೆ ತಾ.ಪಂ ಇಒ ಚಾಲನೆ

ಕೆಜಿಎಫ್,ಸೆ.೨- ಕಮ್ಮಸಂದ್ರ ಗ್ರಾಮ ಪಂಚಾಯ್ತಿಯು ಕೋಲಾರ ಜಿಲ್ಲೆ ಏಕೆ ರಾಜ್ಯದಲ್ಲೇ ಮಾದರಿ ಪಂಚಾಯ್ತಿಯಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಒಂದು ಪಂಚಾಯ್ತಿ ಆಡಳಿತ ಮಂಡಳಿ ತಮ್ಮ ಅಧಿಕಾರವನ್ನು ಹೇಗೆ ಬಳಸಿಕೊಂಡು ಮಾದರಿಯಾಗಿ ಕಲ್ಯಾಣಿ ಪಂಚಾಯ್ತಿ ಕಟ್ಟಡಗಳನ್ನು ನಿರ್ಮೀಸಬಹುದು ಎಂಬುದನ್ನು ಖುದ್ಧು ಅಧ್ಯಯನ ನಡೆಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಒಂದು ಡಾಕ್ಯೂಮೆಂಟರಿ ಮಾಡಿ ಸಲ್ಲಿಸಲಾಗುವುದು ಎಂದು ಕೆಜಿಎಫ್ ತಾಲ್ಲೂಕು ಪಂಚಾಯ್ತಿ ಇಒ ಮಂಜುನಾಥ್ ಹರ್ತಿ ಹೇಳಿದರು .
ಸ್ವಚ್ಚ ಭಾರತ ಅಭಿಯಾನವನ್ನು ಒಂದು ತಿಂಗಳು ಕಾಲ ನಿರಂತರವಾಗಿ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಬೇಕು ಎಂದು ಸರ್ಕಾರ ಆದೇಶ ನೀಡಿರುವ ಹಿನ್ನಲೆಯಲ್ಲಿ ತಾಲ್ಲೂಕು ಪಂಚಾಯ್ತಿ ಇಒ ಮಂಜುನಾಥ್ ಹರ್ತಿ ಕಮ್ಮಸಂದ್ರ ಗ್ರಾಮ ಪಂಚಾಯ್ತಿಯ ಮುಖ್ಯ ರಸ್ತೆ ಬದಿಯಲ್ಲಿ ಬಿದಿದ್ದ ಕಸವನ್ನು ತೆಗೆಯುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ವಸಂತಕುಮಾರ,ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಮ ಸದಸ್ಯ ರಾದ,ಚಲಪತಿ,ರಘು,ಸಾಮ್ಯಾನುಯ್ ಹಾಗೂ ಕಾರ್ಯದರ್ಶಿ ಕೇಶವರೆಡ್ಡಿ ಹಾಗೂ ಹಾಜರಿದ್ದರು.