ಸ್ವಚ್ಚ ಬಳ್ಳಾರಿ ಸ್ವಸ್ತ ಬಳ್ಳಾರಿ ಅಭಿಯಾನ ಕಾರ್ಯಕ್ರಮ

ಬಳ್ಳಾರಿ ಏ 03 : ಮಹಾನಗರ ಪಾಲಿಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನೋಪಾಸನ ಸಂಸ್ಥೆ ಹಾಗೂ ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಫೆಲೋಷಿಪ್ ಇವರ ಸಂಯುಕ್ತಾಶ್ರಯದಲಿ ಸ್ವಚ್ಚ ಬಳ್ಳಾರಿ ಸ್ವಸ್ತ ಬಳ್ಳಾರಿ ಅಭಿಯಾನ ನಿಮಿತ್ತ ಹಸಿ ಕಸ ಮತ್ತು ವಣ ಕಸ ಕಾಂಪೋಸ್ಟಿಂಗ್ ಬಗ್ಗೆ ಬಳ್ಳಾರಿಯ ರೈಲ್ವೆ ಸ್ಟೆಷನ್ ಹಿಂಭಾಗದಲ್ಲಿ ಇರುವ ರೈಲ್ವೆ ಕಾಲೋನಿಯ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ಪ್ರೀತಿ ಗೆಹ್ಲೋಟ್ ಅವರು ಮಾತನಾಡುತ್ತಾ , ಬಳ್ಳಾರಿ ಒಂದು ಸ್ವಚ್ಚ ಮತ್ತು ಸುಂದರ ನಗರವನ್ನು ಮಾಡಿಸುವ ಕನಸಲ್ಲಿ ಬಳ್ಳಾರಿ ನಗರದ ನಿವಾಸಿಗಳಾದ ನಿಮ್ಮೆಲ್ಲರ ಸಹಕಾರ ಮುಖ್ಯವಾದುದು ಎಂದು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ರೈಲ್ವೆ ಕಾಲೋನಿಯ ನಿವಾಸಿಗಳಿಗೆ ಮತ್ತು ಅಧಿಕಾರಿ ವಗರ್ದವರಿಗೆ ಹಸಿ ಕಸ ಮತ್ತು ಒಣ ಕಸವನ್ನು ಹೇಗೆ ನಾವು ನಮ್ಮ ಕಾಲೋನಿಗಳಲ್ಲಿ ಅದನ್ನು ಕಾಂಪೋಸ್ಟ್ ಗೊಬ್ಬರನ್ನು ಮಾಡಿಕೊಳ್ಳುವ ವಿಧಾನದ ಬಗ್ಗೆ ವಿವರಿಸಿದರು, ಮತ್ತು ಕಾಂಪೋಸ್ಟಿಂಗ್ ಪಿಟ್‍ಗೆ ಚಾಲನೆ ನೀಡಿದರು, ತಯಾರಾದ ಗೊಬ್ಬರವನ್ನು ಮನೆಗಳಲ್ಲಿನ ಗಿಡಗಳಿಗೆ ಕಾಲೋನಿಯ ಪಾರ್ಕ್‍ಗಳಿಗೆ ಉಪಯೋಗಿಸಲು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕಾರ್ಯದರ್ಶಿಗಳು, ಎಂ,ಎ, ಷಕೀಬ್ ಕಾರ್ಯಕ್ರಮವನ್ನು ನಿರೂಪಿಸಿದರು, ಡಾ ಹನುಮಂತಪ್ಪ , ಡಾ ವಿಶ್ವನಾಥ್, ಶೇಷಾದ್ರಿ, ಮತ್ತು ಮಹಾನಗರ ಪಾಲಿಕೆಯ ಸಿಬ್ಬಂದ್ದಿ ವರ್ಗದವರು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಫೆಲೋಷಿಪ್‍ನ ಅಧ್ಯಕ್ಷರು ಪೋಲಾ ವಿಕ್ರಮ್, ಸದಸ್ಯರುಗಳಾದ ಶ್ರೀಮತಿ ಸುಮ ವಿರುಪಾಕ್ಷಯ್ಯ, ಮೆಹಬೂಬ್ ಭಾಷ, ಶ್ರೀಮತಿ ಶಮೀಮ್ ಜಕಾಲಿ, ಶ್ರೀಮತಿ ಫರೀಧಾ, ಖಾಜಾ ಮೈನೂದ್ದೀನ್ ಇನ್ನೂ ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.