ಸ್ವಚ್ಚೋತ್ಸವ ಕಾರ್ಯಕ್ರಮ

ಹಿರಿಯೂರು ಮಾ. 31;  ಇಲ್ಲಿನ  ನಗರಸಭೆ ವತಿಯಿಂದ ಪೌರಾಯುಕ್ತರಾದ ಬಿ.ಸಿ.ಬಸವರಾಜ್ ಇವರ ಅಧ್ಯಕ್ಷತೆಯಲ್ಲಿ ಸ್ವಚ್ಚೋತ್ಸವ  ಕಾರ್ಯಕ್ರಮ ನಡೆಸಲಾಯಿತು.  ಕಾರ್ಯಕ್ರಮದಲ್ಲಿ ವಾಗ್ದೇವಿ ಶಾಲೆಯ ವಿದ್ಯಾರ್ಥಿಗಳು, ಶ್ರೀ ಶಕ್ತಿ ಸಂಘ ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಎನ್‌ಜಿಓ ಮತ್ತು ನಗರಸಭೆ ಕಚೇರಿ ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕರು ಭಾಗವಹಿಸಿ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.