ಸ್ವಚ್ಚತೆ ಬಹಿರಂಗಕ್ಕಷ್ಟೆ ಅಲ್ಲ ಅಂತರಂಗಕ್ಕೂ ಸೀಮಿತ

ಹುಬ್ಬಳ್ಳಿ,ಮಾ15 : ‘ಸ್ವಚ್ಚತೆ ಬಹಿರಂಗಕ್ಕೆ ಅಷ್ಟೆ ಅಲ್ಲ ಅಂತರಂಗಕ್ಕೂ ಸೀಮಿತವಾಗಿರುತ್ತದೆ’ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಜಗದ್ಗುರು ಡಾ.ಗುರುಸಿದ್ದ ರಾಜಯೋಗಿಂದ್ರ ಮಹಾ ಸ್ವಾಮೀಜಿಗಳು ತಿಳಿಸಿದರು.

ಕೇಂದ್ರದ ಯುವ ಸಬಲೀಕರಣ, ಕ್ರೀಡಾ ಇಲಾಖೆ, ಬೆಂಗಳೂರಿನ ಪ್ರಾಂತೀಯ ಎನ್.ಎಸ್.ಎಸ್ ಕೇಂದ್ರ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶ ಹಾಗೂ ಹುಬ್ಬಳ್ಳಿಯ ಜೆ.ಜಿ ಕಾಲೇಜುಗಳ ಸಹಯೋಗದಲ್ಲಿ ನಗರದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಿವಿ ಮಟ್ಟದ 7 ದಿನಗಳ ಸ್ವಚ್ಚತಾ ಶಿಬಿರದ 5ನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಮನೆ ಮತ್ತು ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಡಿ. ಅಂದಾಗ ಮನಸ್ಸು ಸಚ್ಚತೆಯಿಂದ ಇರುತ್ತದೆ. ಸ್ವಚ್ಚತೆ ಸದಾ ಕ್ರೀಯಾಶೀಲವಾಗಿರಬೇಕು’ ಎಂದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಆರ್ಶೀವಚನ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಆನಂದ ಆಕಾಡೆಮಿಯ ಆನಂದ ಪಾಟೀಲ ಮಾತನಾಡಿ, ‘ಕಲಿಕಾ ಪ್ರವೃತ್ತಿ ಎಂಬುದು ನಿರಂತರವಾಗಿದ್ದು ತಾವೆಲ್ಲರೂ ತಾಂತ್ರಿಕ ಜಗತ್ತಿನಲ್ಲಿ ಕಲಿಕಾ ಆಸಕ್ತಿಯನ್ನು ಸದಾ ಜಾಗೃತಗೊಳಿಸಿಕೊಂಡಿರಬೇಕು. ಅಂದಾಗ ಯಶಸ್ಸು ಕಾಣಲು ಸಾಧ್ಯವಾಗುತ್ತದೆ’ ಎಂದು ಕಿವಿ ಮಾತು ಹೇಳಿದರು.

ಮತ್ತೋರ್ವ ಅತಿಥಿಗಳಾದ ಧಾರವಾಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಸಾಲಗಟ್ಟಿ ಮಾತನಾಡಿ,’ಪೆÇೀಕ್ಸೋ ಕಾಯ್ದೆಯ ಕುರಿತು ಮಾಹಿತಿಯನ್ನು ನೀಡುತ್ತ ಅನವಶ್ಯಕ ಹವ್ಯಾಸಗಳನ್ನು ಬದಲಾಯಿಸಿ ಹಣೆಬರಹ ಬದಲಾಗುತ್ತದೆ. ಸದಾ ಕ್ರೀಯಾಶೀಲ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಿಮ್ಮದಾಗಿಸಿಕೊಳ್ಳಿ’ ಎಂದು ಶುಭಹಾರೈಸಿದರು.

ಜೆಜಿ ಮಹಾವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರಾದ ಎಸ್ ಎಸ್ ಪಾಟೀಲ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಕಾರ್ಯಕ್ರಮ ಅಧಿಕಾರಿ ಪೆÇ್ರ.ರಾಮಚಂದ್ರ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಕ.ವಿ.ರಾಸೇಯೋ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ ಬಿ ದಳಪತಿ, ಪೆÇ್ರ.ವಿ.ಎಸ್.ಕಟ್ಟಿಮಠ,ಮ್ಯಾಗ್ಲೀನ್ ಕ್ರೂಜ್, ಡಾ.ಎನ್.ಎಮ್.ಸಂಗಮ್ಮನವರ, ಪೆÇ್ರ.ಎಂ.ಡಿ.ಪಾಟೀಲ, ಪೆÇ್ರ.ಮೀನಾಕ್ಷಿ .ಬಿ, ಪೆÇ್ರ.ಚನ್ನಬಸಪ್ಪ ಕುಮ್ಮೂರ, ಪೆÇ್ರ.ಮರಿಗೌಡ, ಪೆÇ್ರ.ಕುರಿ, ಪೆÇ್ರ.ಭಾರತಿ ದೊಡ್ಡಮನಿ, ಪ್ರಬಲ್, ಕಾರ್ಯಕ್ರಮ ಅಧಿಕಾರಿಗಳು, ಶಿಬಿರದ ಸ್ವಯಂ ಸೇವಕರು ಉಪಸ್ಥಿತರಿದ್ದರು.