ಸ್ವಚ್ಚತೆ ಕಾಪಾಡದ ಚೇಳೂರು ಗ್ರಾ.ಪಂ.: ಆರೋಪ

ಚೇಳೂರು, ಜು. ೨೯- ಗುಬ್ಬಿ ತಾಲ್ಲೂಕಿನ ಚೇಳೂರು ಪಟ್ಟಣದ ಸಿರಾ ರಸ್ತೆ ಹಾಗೂ ಹೊಸಕೆರೆ ರಸ್ತೆಯಲ್ಲಿ ಪಟ್ಟಣದ ಕೋಳಿ ಹಾಗೂ ಮಾಂಸದ ಅಂಗಡಿ ಮಾಲೀಕರು ಸಾರ್ವಜನಿಕರ ರಸ್ತೆಬದಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ನಾಯಿಗಳ ಕಾಟ ಹೆಚ್ಚಾಗಿ ಸಾಕಷ್ಟು ಅಪಘಾತಗಳು ಸಂಭವಿಸಿದ್ದರೂ ತಲೆಕೆಡಿಸಿಕೊಳ್ಳದ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಚೇಳೂರು ಗ್ರಾಮ ಪಂಚಾಯ್ತಿ ಆರ್ಥಿಕವಾಗಿ ಜಿಲ್ಲೆಯಲ್ಲೇ ಮುಂದಿದ್ದರೂ ಸ್ವಚ್ಛತೆ ಕಾಪಾಡುವಲ್ಲಿ ಸಂಪೂರ್ಣ ವಿಪಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಭಾನುವಾರ ಸಂತೆ ನಡೆಯುತ್ತದೆ. ಆದರೆ ಅದು ಸುರಕ್ಷಿತವಾಗಿಲ್ಲ. ಒಟ್ಟಾರೆ ಚೇಳೂರಿನಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪಂಚಾಯತ್ ಅಧಿಕಾರಿಗಳ ವಿಫಲತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.