ಸ್ವಚ್ಚತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು: ಎ.ಆರ್.ಕೃಷ್ಣಮೂರ್ತಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.04:- ಉತ್ತಮ ಪರಿಸರ ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಂಡರೆ ಆರೋಗ್ಯವಂತರಾಗಿ ಇರಬಹುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಯಳಂದೂರಿನ ಸರ್ಕಾರಿ ಆಸ್ಪತ್ರೆ ಅವರಣದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ಚಾಮರಾಜನಗರ, ಜೋಗಿ ರಂಗಜೋಳಿಗೆ ಕೊಳ್ಳೇಗಾಲ ಮತ್ತು ಸಾರ್ವಜನಿಕ ಆಸ್ಪತ್ರೆ ಯಳಂದೂರು ಇವರಆಶ್ರಯದಲ್ಲಿ ನಡೆದ ಶ್ರಮದಾನ ಮತ್ತು ವನ ಮಹೋತ್ಸವಕಾರ್ಯಕ್ರಮದಲ್ಲಿ ಗಿಡಗಳಿಗೆ ನೀರು ಹಾಕುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.
ಮನೆ, ಆಸ್ಪತ್ರೆ, ಶಾಲೆ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಮನೆಯಿಂದಲೇ. ನೈರ್ಮಲ್ಯ ಪಾಠ ಪ್ರಾರಾಂಭಿಸಬೇಕು. ಯಳಂದೂರಿನ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆಏರಿಸಲಾಗಿದ್ದು, ಆದಷ್ಟು ಬೇಗ ಇದನ್ನು 100 ಹಾಸಿಗೆಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಆಸ್ಪತ್ರೆ ಹಿಂಭಾಗದಲ್ಲಿ ಕಳೆಗಿಡಗಳು, ಪೆÇದೆ ಹೆಚ್ಚಾಗಿದ್ದು ಅದನ್ನು ಸ್ವಚ್ಚಗೊಳಿಸಿ ಅಲ್ಲಿ 200 ಸಾಲು ಗಿಡಗಳನ್ನು ನೆಡಲು ಈಶ್ವರಿ ಸೋಷಿಯಲ್ ಟ್ರಸ್ಟ್ ಕ್ರಮಕೈಗೊಂಡಿರುವುದು ಶ್ಲಾಘನೀಯಎಂದರು.
ಆಸ್ಪತ್ರೆಯ ವೈದ್ಯಾಧಿಕಾರಿ ಶ್ರೀಧರ್ ಮಾತನಾಡಿ ಆಸ್ಪತ್ರೆಗೆ ಹಣ ನೀಡಿಉಪಯೋಗಿಸುವ ಶೌಚಾಲಯ, ಬಸ್ ತಂಗುದಾಣ, ಶೀಘ್ರವಾಗಿ ಪ್ರಾರಾಂಭಿಸಬೇಕಿದೆ. ಆಸ್ಪತ್ರೆಆವರಣವನ್ನು ಸ್ವಚ್ಚವಾಗಿಡಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಶ್ರಮದಾನ ಮತ್ತು ವನ ಮಹೋತ್ಸವಕಾರ್ಯಕ್ರಮದಲ್ಲಿ ಭಾಗವಹಿಸಿದ ಆಶಾ ಕಾರ್ಯಕರ್ತರು, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಮಾಣ ನೀಡಲಾಯಿತು.
ಕಾರ್ಯಕ್ರಮದಲ್ಲಿಜೋಗಿ ರಂಗಜೋಳಿಗೆ ಅಧ್ಯಕ್ಷಜೆ.ಮುಡಿಗುಂಡಮೂರ್ತಿ, ಈಶ್ವರಿ ಸೋಷಿಯಲ್‍ಟ್ರಸ್ಟ್‍ಅಧ್ಯಕ್ಷ ಸಿ.ಎಂ.ವೆಂಕಟೇಶ್, ಜಿಲ್ಲಾಆರೋಗ್ಯಅಧಿಕಾರಿಡಾ. ವಿಶ್ವೇಶ್ವರಯ್ಯ, ಪಿ.ಯುಡಿ.ಡಿ ಮಂಜುನಾಥ ಪ್ರಸನ್ನ, ತಹಸಿಲ್ದಾರ್ ಜಯಪ್ರಕಾಶ್, ಬಿ.ಇ.ಒ ಕಾಂತರಾಜು, ಪಟ್ಟಣ ಪಂಚಾಯಿತಿರವಿಕೀರ್ತಿ, ವೈದ್ಯರಾದ ನಾಗೇಂದ್ರಮೂರ್ತಿ, ನಾಗೇಶ್, ಶಶಿರೇಖ, ಪ್ರವೀಣ್, ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಬಾವತಿ, ಮಹೇಶ್, ರಂಗನಾಥ್, ಪೌರಕಾರ್ಮಿಕರು, ಜೆ.ಎಸ್.ಎಸ್‍ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಪಿ.ಯು.ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.