ಸ್ವಚ್ಚತೆಗೆ ಆದ್ಯತೆ ನೀಡಲು ಕರೆ

ಅಥಣಿ,ಸೆ17 : ತಾಲೂಕಿನ ಜಕ್ಕಾರಟ್ಟಿ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಮನೆಮನೆಗೆ ಶೌಚಾಲಯ ನಿರ್ಮಿಸಬೇಕು. ಗ್ರಾಮ ಪಂಚಾಯತ್ ನ ಆದಾಯ ಹೆಚ್ಚು ಮಾಡಲು ಸಮಯಕ್ಕೆ ಸರಿಯಾಗಿ ಕರ ವಸೂಲಾತಿ ಮಾಡಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಹಾಗೂ ನೊಡಲ್ ಅಧಿಕಾರಿ ಶ್ವೇತಾ ಹಾಡಕರ ಸೂಚನೆ ನೀಡಿದರು.
ಅವರು ಅಥಣಿ ತಾಲೂಕಿನ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯ ಜಕ್ಕಾರಟ್ಟಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸನ್ 2021-22 ರ ಸಾಲಿನ ಜಮಾಬಂದಿ ಕಾರ್ಯಕ್ರಮದ ನೊಡಲ್ ಅಧಿಕಾರಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.
ಪಂಚಾಯತಗೆ ಸರ್ಕಾರದಿಂದ ಇಲ್ಲಿಯವರೆಗೆ ಸುಮಾರು 1ಕೋಟಿ ರೂ. ಅನುದಾನ ಬಂದಿರುವುದರಿಂದ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಬರುವ ಅನುದಾನದ ಸದುಪಯೋಗ ಆಗಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಪರಿಶೀಲನೆ ಮಾಡಿದರು. ಈ ಗ್ರಾಮದಲ್ಲಿರುವ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಜಮಾಬಂದಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ಸಿದ್ದು ಬಾಳು ಖೋತ ವಹಿಸಿದ್ದರು.
ಈ ವೇಳೆ ಉಪಾದ್ಯಕ್ಷ ರೇಷ್ಮಾ ಕಾಂಬಳೆ, ಶಾಂತಾ ಶಿಂಧೆ, ಬಾವುಸೋ ಚವ್ಹಾಣ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎ ಎಸ್ ಕುಲಕರ್ಣಿ ಕಾಯದರ್ಶ ಗಳಾದ ರಾಜು ಪಾಟೀಲ, ಅಪ್ಪಾಸಾಬ ಪಾಟೀಲ, ಗೋಪಾಲ ಶಿಂಧೆ, ಮನೋಜ ಖೋತ ಉಪಸ್ಥಿತರಿದ್ದರು.