ಸ್ವಚ್ಚತಾ ಕಾರ್ಯದಲ್ಲಿ ಮೇಯ

ರ್ದಾವಣಗೆರೆ.ಸೆ.೨೬: ಮಹಾನಗರ ಪಾಲಿಕೆಯ ವಾರ್ಡ್ ನಂ 25ರ ಡಿಸಿಎಂ ಬಡಾವಣೆಯ ವಿವೇಕಾನಂದ ಪಾರ್ಕ್ ನಲ್ಲಿ ಪೌರ ಕಾರ್ಮಿಕರ ಜತೆ ಮೇಯರ್ ಎಸ್. ಟಿ. ವೀರೇಶ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸ್ವಚ್ಛತಾ ಕಾರ್ಯ ಮುಗಿದ ನಂತರ ಪೌರ ಕಾರ್ಮಿಕರ ಜತೆ ಕುಳಿತುಕೊಂಡು ಮೇಯರ್ ಸಹ ಉಪಹಾರ ಸೇವಿಸಿದರು. ಈ ಮೂಲಕ ಮೇಯರ್ ಎಸ್ .ಟಿ. ವೀರೇಶ್ ಸರಳತೆ ಮೇರೆದರು. ಪೌರ ಕಾರ್ಮಿಕರೂ ಕೂಡ ಮೇಯರ್ ಕಾರ್ಯವೈಕರಿ ಕಂಡು ಪೌರ ಕಾರ್ಮಿಕರು ತುಂಬಾ ಉತ್ಸಾಹದಿಂದ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಡಿಸಿಎಂ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ತಿರುಮಲೇಶ, ಉಮೇಶ್ ಗುಜ್ಜಾರ್ , ನಾಗರಾಜ್ ಕೆ ,ಹುಲಿಕಟ್ಟೆ ರಾಜು ,ಬಸವರಾಜ ಅಂಗಡಿ ,ಶಿವನಪ್ಪ ,ಅಕ್ಕಿ ವೀರಭದ್ರಪ್ಪ ಹಾಗೂ ಪೌರಕಾರ್ಮಿಕರು ಮತ್ತು ಬಿಜೆಪಿ ಕಾರ್ಯಕರ್ತರಿದ್ದರು.